ಉಪ್ಪಳದಲ್ಲಿ ವ್ಯಾಪಾರ ಸಂಸ್ಥೆಯಲ್ಲಿ ಅಗ್ನಿ ದುರಂತ
ಉಪ್ಪಳ: ಉಪ್ಪಳ ಪೇಟೆಯಲ್ಲಿ ವ್ಯಾಪಾರ ಸಂಸ್ಥೆಯೊAದು ಅಗ್ನಿ ದುರಂತಕ್ಕೀಡಾಗಿದ್ದು, ಭಾರೀ ನಾಶ ನಷ್ಟ ಉಂಟಾದ ಘಟನೆ ನಡೆದಿದೆ. ಯೂಸಫ್ ಸಿ.ಎ ಎಂಬವರ ಕೆ.ಎಂ ಸೂಪರ್ ಮಾರ್ಕೇಟ್‌ನಲ್ಲಿ ನಿನ್ನೆ ಸಂಜೆ ಶಾರ್ಟ್ ಸರ್ಕೂ್ಯಟ್ ನಿಂ ದಾಗಿ ಅಗ್ನಿ ದುರಂತ ಸಂಭವಿಸಿದೆ. ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಲು ಮುಂದಾದರೂ ಸಾಧ್ಯವಾಗಲಿಲ್ಲ ಬಳಿಕ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿಯನ್ನು ನಂದಿಸಲಾಗಿದೆ. ಅಗ್ನಿ ದುರಂತದಿAದ ಎರಡು ಫ್ರಿಜ್, ಸ್ಕೇಲ್, ವಯರಿಂಗ್ ಸಹಿತ ಸಮಾಗ್ರಿಗಳು ಉರಿದುಹೊಗಿದ್ದು, ಲಕ್ಷಾಂತರ ರೂ ನಾಶನಷ್ಟ ಅಂದಾಜಿಸಲಾಗಿದೆ.