ಊರಿನ ಉತ್ಸವವಾಗಿ ಬದಲಾದ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ತೆರೆ
ಮುಳ್ಳೇರಿಯ: ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾಪ್ತಿಯಾಗ ಲಿದೆ. ಕಳೆದ ೫ರಿಂದ ಕಾರಡ್ಕ ಸರಕಾರಿ ಶಾಲೆಯಲ್ಲಿ ನಡೆದು ಬರುತ್ತಿರುವ ಶಾಲಾ ಕಲೋತ್ಸವಕ್ಕೆ ಇಂದು ಸಂಜೆ ೫ ಗಂಟೆಗೆ ತೆರೆ ಬೀಳಲಿದ್ದು, ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೋಯ್ ಮುಖ್ಯ ಅತಿಥಿಯಾಗಿ ರುವರು. ವಿಜೇತರಿಗೆ ಎಡಿಎಂ ನವೀನ್ ಬಾಬು ಕೆ, ಎ.ಪಿ. ಉಷಾ, ಎಂ. ಶ್ರೀಧರ ಟ್ರೋಫಿ ವಿತರಿಸುವರು. ಅಡುಗೆ ಸಿದ್ಧಪಡಿಸಿದವರನ್ನು ಪಿ.ವಿ. ಮಿನಿ, ಲೈಟ್ ಆಂಡ್ ಸೌಂಡ್ಸ್ನ ವರನ್ನು ಹಮೀದ್ ಪೊಸಳಿಗೆ ಭಿನಂದಿಸುವರು. ವಿವಿಧ ಪಕ್ಷಗಳ, ಸಂಘಟನೆಗಳ ಪ್ರತಿನಿಧಿಗಳು ಶುಭ ಕೋರುವರು. ಇಂದು ಬೆಳಿಗ್ಗೆ ವೇದಿಕೆ ಒಂದರಲ್ಲಿ ಹೈಯರ್ ಸೆಕೆಂಡರಿ ಗಂಡು ಮಕ್ಕಳ ಜನಪದ ನೃತ್ಯದೊಂದಿಗೆ ಇಂದಿನ ಸ್ಪರ್ಧೆಗಳು ಆರಂಭ ಗೊಳ್ಳಲಿದೆ.