ಎಂ.ವಿ. ಬಾಲಕೃಷ್ಣನ್ ಇಂದು ಕಾಞಂಗಾಡ್ ಮಂಡಲದಲ್ಲಿ ಪರ್ಯಟನೆ
ಕಾಸರಗೋಡು: ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ನಿನ್ನೆ ಕಾಸರಗೋಡು ಮಂಡಲದಲ್ಲಿ ಪರ್ಯಟನೆ ನಡೆಸಿದರು. ಕಡಪ್ಪುರ ದಿಂದ ಅವರು ಪರ್ಯಟನೆ ಆರಂಭಿ ಸಿದ್ದರು. ಈ ವೇಳೆ ಕೊನ್ನೆ ಹೂವುಗ ಳನ್ನು ನೀಡಿ ಚೆಂಡೆ ಮೇಳದ ಹಿನ್ನೆಲೆ ಯೊಂದಿಗೆ ಅಭ್ಯರ್ಥಿಗೆ ಸ್ವಾಗತ ನೀಡಲಾಗಿದೆ. ಚೌಕಿ, ಬಳ್ಳೂರು, ಉಳಿಯತ್ತಡ್ಕ, ಮೀಪುಗುರಿ, ಪಟ್ಲ, ನೀರ್ಚಾಲು, ಬದಿಯಡ್ಕ, ಉಕ್ಕಿನಡ್ಕ, ಮಾರ್ಪನಡ್ಕ, ಮುಕ್ಕೂರು, ಕುಳದಪಾರೆ, ಕೈತ್ತೋಡು, ರಹ್ಮತ್ ನಗರ, ಮುಳ್ಳೇರಿಯ, ಕೊಟ್ಟಂಗುಳಿ, ಮುಂಡೋಳು ಜಂಕ್ಷನ್, ೧೩ನೇ ಮೈಲು, ಪೈಕ, ಅದ್ರುಗುಳಿ, ಎಡನೀರು, ಬೇವಿಂಜ, ಆಲಂಪಾಡಿ ಎಂಬೆಡೆಗ ಳಲ್ಲಿ ಪರ್ಯಟನೆ ನಡೆಸಿ ಚೆನ್ನಿಕೆರೆ ಯಲ್ಲಿ ಸಮಾಪ್ತಿಗೊಂಡಿತು. ಇಂದು ಕಾಞಂಗಾಡ್ ಮಂಡಲದಲ್ಲಿ ಪರ್ಯಟನೆ ನಡೆಸುವರು.