ಎಂಡಿಎಂಎ ಸಹಿತ ಓರ್ವ ಸೆರೆ

ಕಾಸರಗೋಡು: ೮ ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಯಾಗಿದ್ದಾನೆ. ವಿದ್ಯಾನಗರ ಚಾಲ ರಸ್ತೆಯ ರಫೀಕ್ ಮನ್‌ಜಿಲ್‌ನ ಮುಹಮ್ಮದ್ ರಾಸಿಕ್ (೨೯)ನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ರಂಜಾನ್ ಹಬ್ಬದ ದಟ್ಟಣೆ ಮಧ್ಯೆ ಪೊಲೀಸರು ಪಟ್ರೋಲಿಂಗ್ ಹಾಗೂ ಜಾಗ್ರತೆಯನ್ನು ತೀವ್ರಗೊಳಿಸಿದ್ದು ತಪಾಸಣೆ ಮಧ್ಯೆ ಹಳೆ ಬಸ್ ಸ್ಟಾಂಡ್, ನಾಯಕ್ಸ್ ರೋಡ್ ಸಮೀಪದ ಅಂಗಡಿಯೊಂದರ ಮುಂಭಾಗ ನಿಂತಿದ್ದ ಈತನನ್ನು ಶಂಕೆ ತೋರಿ ವಿಚಾರಿಸಿದಾಗ ಈತನ ಪರ್ಸ್‌ನಲ್ಲಿ ಮಾದಕ ದ್ರವ್ಯ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಅಖಿಲ್ ಪಿ.ಪಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ವಿನೋದ್ ಕುಮಾರ್, ಸಿಪಿಒ ಸತೀಶ್ ಜೋಸೆಫ್ ಎಂಬಿವರು ಸೇರಿ ಸೆರೆ ಹಿಡಿದಿದ್ದಾರೆ.

RELATED NEWS

You cannot copy contents of this page