ಎಕೆಪಿಎ ಜಿಲ್ಲಾ ಸಮ್ಮೇಳನ ನ.22ರಂದು: ಸ್ವಾಗತಸಮಿತಿ ರೂಪೀಕರಣ
ಕುಂಬಳೆ: ಆಲ್ ಕೇರಳ ಫೊಟೋ ಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನದ ಸ್ವಾಗತಸಮಿತಿ ರೂಪೀಕರಣ ಸಭೆ ಕುಂಬಳೆ ಪೈ ಕಾಂಪ್ಲೆಕ್ಸ್‌ನಲ್ಲಿ ನಿನ್ನೆ ಜರಗಿತು. ಎಕೆಪಿಎ ಜಿಲ್ಲಾಧ್ಯಕ್ಷ ಕೆ.ಸಿ. ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಾಂತ್ವನ ಸಮಿತಿ ಸಂಚಾಲಕ ಪ್ರಜೀಶ್ ಮಣಿ ಉದ್ಘಾಟಿಸಿದರು. ಅವರು ಮಾತನಾಡಿ, ಕುಂಬಳೆಯಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲಾ ಸದಸ್ಯರಲ್ಲೂ ಇದೆ ಎಂದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ರಾಜ್ಯ ಸಮಿತಿಯ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಸಹಕಾರ್ಯದರ್ಶಿ ಅನೂಪ್ ಚಂದೇರ, ಅಶೋಕನ್ ಪೊಯಿನಾಚಿ, ಸುಧೀರ್, ವಿಜಯನ್, ಸನ್ನಿ ಜೇಕಬ್, ಸುಕು, ರಾಜೇಂದ್ರನ್, ವಾಸು ಎ, ಎನ್.ಎ. ಭರತನ್, ಜನಾರ್ದನನ್, ಸುನಿಲ್ ಕುಮಾರ್ ಶುಭ ಹಾರೈಸಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸ್ವಾಗತಿಸಿ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ. ವಂದಿಸಿದರು. ನಾರಾ ಯಣ ಓಡಂಗಲ್ಲು ಪ್ರಾರ್ಥನೆ ಹಾಡಿದರು. ವಿವಿಧ ವಲಯಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡರು.