ಎದೆನೋವು: ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತ್ಯು

ಕುಂಬಳೆ: ಎದೆನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಮಾಜಿ ಗಲ್ಫ್ ಉದ್ಯೋಗಿ ಮೃತಪಟ್ಟರು. ಕೊಡ್ಯಮ್ಮೆ ಚೆಂಗಿನಡ್ಕದ ದಿ| ಅಬ್ಬಾಸ್- ರುಖಿಯ ದಂಪತಿಯ ಪುತ್ರ ಅಬ್ದುಲ್ಲ ಯಾನೆ ಅದ್ಲು (50) ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ 6 ಗಂಟೆ ವೇಳೆ ಎದೆನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಅಬ್ದುಲ್ಲರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಊರಿನಲ್ಲಿ ರಾಜಕೀಯ ಸಾಮಾಜಿಕರಂಗದಲ್ಲಿ ಅಬ್ದುಲ್ಲ ಕಾರ್ಯಾಚರಿಸುತ್ತಿದ್ದರು. ಗಲ್ಫ್ ಉದ್ಯೋಗ ಕೊನೆಗೊಳಿಸಿ ಕಳೆದ ಐದು ವಷಗಳಿಂದ ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರ ಅಂತ್ಯ ಸಂಸ್ಕಾರ ನಿನ್ನೆ ಬೆಳಿಗ್ಗೆ ಕೊಡ್ಯಮ್ಮೆ ಜುಮಾ ಮಸೀದಿ ಬಳಿ ನಡೆಯಿತು. ಮೃತರು ಪತ್ನಿ ಫೌಸಿಯ, ಮಕ್ಕಳಾದ ಸಿನಾನ್, ಸುಹೈಲ್, ಸಿದ್ದಿಕ್, ಸನ, ಸಹೋದರ ಮುಹಮ್ಮದ್ (ಸೌದಿ ಅರೇಬಿಯ), ಸಹೋದರಿ ಅವ್ವಮ್ಮ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರಿ ಉಮ್ಮಾಲಿಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page