ಒಂದು ದೇಶ, ಓರ್ವನೇ ನೇತಾರ ಎಂಬ ಬಿಜೆಪಿಯ ನಿಲುವು ಅಂಗೀಕರಿಸುವಂತಿಲ್ಲ-ರಾಹುಲ್ ಗಾಂಧಿ

ಕಲ್ಪೆಟ್ಟ:  ಒಂದೇ ದೇಶ ಓರ್ವನೇ ನೇತಾರ ಎಂಬ ನೀತಿಯನ್ನು ಭಾರತ ದಲ್ಲಿ ಬಲವಂತವಾಗಿ ಹೇರಲು  ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಯತ್ನಿಸುತ್ತಿದೆಯೆಂದೂ, ಅದನ್ನು ಸುತರಾಂ ಆಂಗೀಕರಿಸುವಂ ತಿಲ್ಲವೆಂದು ವಯನಾಡು ಲೋಕಸಭಾ ಕ್ಷೇತ್ರದ ಉಮೇದ್ವಾರನಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ವಯನಾಡು ಲೋಕಸಭಾ ಕ್ಷೇತ್ರದ ಐದು ಕೇಂದ್ರಗಳಲ್ಲಿ ನಿನ್ನೆ ರೋಡ್ ಶೋ ನಡೆಸಿದ ಬಳಿಕ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.ಆರ್‌ಎಸ್‌ಎಸ್‌ನ ತತ್ವಸಿದ್ಧಾಂತದ ವಿರುದ್ಧ ಸದಾ ಹೋ ರಾಡುತ್ತಿರುವ ಪಕ್ಷವಾಗಿದೆ ಕಾಂಗ್ರೆಸ್. ಒಂದು ದೇಶ, ಓರ್ವ ನಾಯಕ ಎಂಬ  ಬಿಜೆಪಿಯ ನಿಲುವಿಗೆ ವಿರುದ್ಧವಾಗಿ ಸಮಸ್ತ ಭಾರತೀಯರನ್ನೂ ಸಮಾನವಾಗಿ ಕಾಣುವ ಪಕ್ಷವಾಗಿದೆ ಕಾಂಗ್ರೆಸ್. ಭಾರತದ ಅದ್ಯಾವುದೇ ಪ್ರಜೆಗೆ ಬೇಕಾದರೂ ದೇಶದ ಪ್ರಧಾನಿಯಾಗ ಬಹುದೆಂಬುವುದು ಕಾಂಗ್ರೆಸ್‌ನ ನಿಲುವಾಗಿದೆ. ಒಂದು ಹೂಗುಚ್ಛದಲ್ಲಿ ಹಲವು ರೀತಿಯ ಹೂವುಗಳಿರಬಹುದು. ಆದರೆ ಅಂತಹ ಹೂವುಗಳ  ಗಾತ್ರ ಅಥವಾ ಬಣ್ಣ ನೋಡಿ ಅದನ್ನು ದೊಡ್ಡದು ಮತ್ತು ಸಣ್ಣದು ಎಂಬ ರೀತಿಯ ವ್ಯತ್ಯಾಸ ನೋಡದೆ, ಅದನ್ನೆಲ್ಲಾ ಸಮಾನವಾಗಿ ಅಂಗೀಕರಿಸಬೇಕು, ಇದು ಕಾಂಗ್ರೆಸ್‌ನ ನಿಲುವು ಆಗಿದೆ ಎಂದು ರಾಹುಲ್ ಹೇಳಿದ್ದಾರೆ. ಬಿಜೆಪಿ ಭಾರತದ ಸಂವಿಧಾನದ ಮೇಲೆ ದಾಳಿ ನಡೆಸಿ ಪ್ರಜಾತಂತ್ರ ಮೌಲ್ಯಗಳನ್ನು ಧ್ವಂಸನಗೈಯ್ಯಲೆತ್ನಿ ಸುತ್ತಿದೆ. ಆದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆ ಬಗ್ಗೆ ಮೌನ ಪಾಲಿಸುವ ನಿಲುವು ಕೈಬಿಡಬೇಕು. ಕೇರಳದಲ್ಲಿ ಬಿಜೆಪಿ ವಿರುದ್ಧ ಏನೂ ಹೇಳದ ಮುಖ್ಯ ಮಂತ್ರಿಯವರ ನಿಲುವು ಸಹಜವಾಗಿ ಸಂಶಯಕ್ಕೆ ಎಡೆಮಾಡಿ ಕೊಡುತ್ತಿದೆ ಯೆಂದು ಅವರು ಹೇಳಿದ್ದಾರೆ.

You cannot copy contents of this page