ಕಂದಲ್ ಸರೋವರ ಕುಸಿದು ವ್ಯಾಪಕ ನಾಶನಷ್ಟ
ಪುತ್ತಿಗೆ: ಭಾರೀ ಮಳೆಯಿಂದ ಕಂದಲ್ ಸರೋವರ ಬಳಿ ಮಣ್ಣು ಕುಸಿದು ಭಾರೀ ನಾಶನಷ್ಟ ಸಂಭವಿಸಿದೆ. ತೀವ್ರ ಮಳೆಯಿಂದಾಗಿ ನೀರು ಉಕ್ಕಿ ಹರಿದ ಪರಿಣಾಮ ಶಿರಿಯ ಅಣೆಕಟ್ಟಿನಿಂದ ಅಂಗಡಿಮೊಗರು ವರೆಗೆ ಕೃಷಿ ಅಗತ್ಯಕ್ಕಾಗಿ ನಿರ್ಮಿಸಿದ ಸರೋವರ ಕುಸಿದಿದೆ. ಈ ವೇಳೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕೊಚ್ಚಿ ಹೋಗಿ ಸಮೀಪದ ತೋಟದಲ್ಲಿ ತುಂಬಿಕೊಂಡಿದೆ. ಇದರಿಂದ ಹಲವು ಅಡಿಕೆ ಮರಗಳು ನಾಶಗೊಂಡಿವೆ. ಅಲ್ಲದೆ ಕಂದಲ್ ಲ್ಪಿ ಶಾಲೆ, ಜುಮಾ ಮಸೀದಿ, ಕೋಡಿ, ಮದಕ್ಕಮೂಲೆ ಎಂಬಿಡೆಗಳಿಗಿರುವ ರಸ್ತೆ ಕೂಡಾ ಹಾನಿಯಾಗಿದೆ. ಈ ಭಾಗಕ್ಕೆ ಸಾರಿಗೆ ಸೌಕರ್ಯ ಒದಗಿಸಬೇಕು, ಅದೇ ರೀತಿ ಕೃಷಿ ನಾಶವುಂಟಾದುದಕ್ಕೆ ನಷ್ಟ ಪರಿಹಾರ ನೀಡಬೇಕೆಂದು ಮುಸ್ಲಿಂ ಜಮಾಅತ್ ಪದಾಧಿಕಾರಿಗಳಾದ ಸುಲೈಮಾನ್ ಕರಿವೆಳ್ಳಿರು, ಬಷೀರ್ ಪುಳಿಕ್ಕೂರು, ಕಂದಲ್ ಸೂಫಿ ಮದನಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ