ಕರಂದಕ್ಕಾಡು: ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಷ್ಠಾ ದಿನಾಚರಣೆ, ಗುರುಪೂಜೆ ನಾಳೆ
ಕಾಸರಗೋಡು: ಕರಂದಕ್ಕಾಡು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 19ನೇ ವರ್ಷದ ಪ್ರತಿಷ್ಠಾ ದಿನಾಚರಣೆ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, ಗಣಪತಿ ಹೋಮ, 9.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 10ರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಗುರುಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ೪ ಗಂಟೆಗೆ ಜರಗುವ ಧಾರ್ಮಿಕ ಸಭೆಯನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಉದ್ಘಾಟಿಸುವರು.
ಬಿಲ್ಲವ ಸೇವಾ ಸಂಘ ಅಧ್ಯಕ್ಷ ರಘು ಕೆ. ಮೀಪುಗುರಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ವೀರಪ್ಪ ಅಂಬಾರು ಧಾರ್ಮಿಕ ಭಾಷಣ ನಡೆಸುವರು. ಶಿವಗಿರಿ ಮಠದ ಶ್ರೀ ಆತ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಹಲವರು ಭಾಗವಹಿಸುವರು. ಇದೇ ವೇಳೆ ಡಾ. ರಾಜಶೇಖರ ಕೋಟ್ಯಾನ್ರಿಗೆ ಪೌರ ಸನ್ಮಾನ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಶಿವಾನಂದ, ವಾಸು ಬಾಯಾರು, ಉಮೇಶ, ಲವ ಮೀಪುಗುರಿ, ನ್ಯಾಯವಾದಿ ಹರ್ಷಿತ, ಗಣೇಶ ಕೇಳುಗುಡ್ಡೆ, ಶಶಿಮಣಿ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.
ಮಧ್ಯಾಹ್ನ ಸ್ಥಳೀಯ ಪ್ರತಿಭೆಗಳಿಂದ ನತ್ಯ ಕಾರ್ಯಕ್ರಮ, ರಾತ್ರಿ 7.30ರಿಂದ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.