ಕಾಂಚಿ ಕಾಮಕೋಟಿ ಶ್ರೀ 17ರಂದು ಎಡನೀರು ಮಠದಲ್ಲಿ ಮೊಕ್ಕಾಂ
ಎಡನೀರು: ಕಾಂಚಿ ಕಾಮಕೋಟಿ ಪೀಠಾಧೀಶ್ವರ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಈ ತಿಂಗಳ 17ರಂದು ಬೆಳಿಗ್ಗೆ 8.30ಕ್ಕೆ ಎಡನೀರು ಮಠಕ್ಕೆ ಚಿತ್ತೈಸುವರು. ಅವರು 18ರಂದು ಮುಂಜಾನೆ 5.30ರ ತನಕ ಮಠದಲ್ಲಿ ಮೊಕ್ಕಾಂ ಹೂಡುವರು. ಇದರಂಗವಾಗಿ 17ರಂದು ಬೆಳಿಗ್ಗೆ 8.30ಕ್ಕೆ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 10.30ರಿಂದ ಸ್ವಾಮೀಜಿಯವರಿಂದ ಸಂಸ್ಥಾನ ದೇವರ ಪೂಜೆ, ಸಂಜೆ 5.30ಕ್ಕೆ ಅಭಿನಂದನಾ ಕಾರ್ಯಕ್ರಮ, ರಾತ್ರಿ 7ರಿಂದ ಖ್ಯಾತ ಕಲಾವಿದರಿಂದ ಜಾಂಬವತಿ ಕಲ್ಯಾಣ ಕಥಾ ಭಾಗದ ಯಕ್ಷಗಾನ ಬಯಲಾಟ ನಡೆಯ ಲಿದೆಯೆಂದು ಎಡನೀರು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಮಠದ ಭಕ್ತರ ಸಭೆ ಇಂದು ಸಂಜೆ 6 ಗಂಟೆಗೆ ಮಠದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.