ಕಾಮಗಾರಿ ಅರ್ಧದಲ್ಲಿ ಮೊಟಕು: ಕಳತ್ತೂರು-ಕಿದೂರು-ಜೋಡುಕಟ್ಟೆ ರಸ್ತೆಯಲ್ಲಿ ಸಂಚಾರ ಸಮಸ್ಯೆ

ಕುಂಬಳೆ; ೫೦೦ ಮೀಟರ್ ರಸ್ತೆಗೆ ಡಾಮರೀಕರಣ ನಡೆಸಲು ಕಳೆದ ಎಪ್ರಿಲ್‌ನಲ್ಲಿ ಆರಂಭಿಸಿದ ಕಾಮಗಾರಿಯಿಂ ದಾಗಿ ನಾಗರಿಕರಿಗೆ ಆ ರಸ್ತೆ ಮೂಲಕ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂಬ ದೂರು ಉಂಟಾಗಿದೆ.

ಕುಂಬಳೆ ಪಂಚಾಯತ್‌ನ ಕಳತ್ತೂರು-ಕಿದೂರು-ಜೋಡುಕಟ್ಟೆ ದೇವಸ್ಥಾನ ರಸ್ತೆಯಲ್ಲಿ ದೇವಸ್ಥಾನ ಸಮೀಪ ೫೦೦ ಮೀಟರ್ ರಸ್ತೆಗೆ ಮರು ಡಾಮರೀಕರಣ ನಡೆಸಲು ಪಂಚಾಯತ್ ಅನುಮತಿ ನೀಡಿರುತ್ತದೆ. ರಸ್ತೆ ನಿರ್ಮಿಸಿದ ಕಾಲದಲ್ಲಿ ನಡೆಸಿದ ಡಾಮರೀಕರಣ ಹಾನಿಗೀಡಾದ ಹಿನ್ನೆಲೆಯಲ್ಲಿ ಮರು ಡಾಮರೀಕರಣ ನಡೆಸಲು ಅನುಮತಿ ನೀಡಲಾಗಿದೆ ಎನ್ನಲಾಗುತ್ತಿದೆ. ಗುತ್ತಿಗೆ ಲಭಿಸಿದೊಡನೆ ಗುತ್ತಿಗೆದಾರ ಅದೇ ೫೦೦ ಮೀಟರ್ ಹಳೆಯ ರಸ್ತೆಯ ಅವಶಿಷ್ಟಗಳನ್ನು  ಜೆಸಿಬಿ ಬಳಸಿ ಅಗೆದು ಹಾಕಿದ್ದಾನೆ. ಜಲ್ಲಿ ಕಲ್ಲು ತಂದು ರಸ್ತೆಯಲ್ಲಿ ತುಂಬಿಸಿ ಮತ್ತೆ ರೋಲರ್ ಓಡಿಸಲಾಗಿದೆ. ಅಷ್ಟರಲ್ಲಿ ಕಾಮಗಾರಿ ಮೊಟಕುಗೊಂ ಡಿದೆ. ಅನಂತರ ಅದೇ ರಸ್ತೆಯ ಮೂಲಕ ಬಸ್ ಮತ್ತಿತರ ವಾಹನಗಳು ಸಂಚರಿಸ ತೊಡಗಿದಾಗ ಜಲ್ಲಿ ಚೆಲ್ಲಾಪಿಲ್ಲಿಗೊಂಡಿದೆ. ಇದ ರಿಂದ ವಾಹನಗಳು ಸಂಚರಿಸುವಾಗ ರಸ್ತೆ ಬದಿ ನಡೆದು ಹೋಗುವವರ ಮೈಮೇಲೆ ಕಲ್ಲುಗಳು ಎಸೆಯಲ್ಪ ಡುತ್ತಿದೆಯೆಂದು ವಿದ್ಯಾರ್ಥಿಗಳು ಹಾಗೂ ನಾಗರಿಕರು ದೂರುತ್ತಿದ್ದಾರೆ. ಆದರೆ ಕಾಮಗಾರಿ ಮೊಟಕುಗೊಳಿಸಿ ರುವುದು ಪಂಚಾಯತ್ ಅಧಿ ಕಾರಿಗಳಾಗಿದ್ದಾರೆಂದು ಗುತ್ತಿಗೆದಾರ ತಿಳಿಸುತ್ತಿದ್ದಾನೆ. ಏನೇ ಆದರೂ ಅಭಿವೃದ್ಧಿ ಈ ರೀತಿಯಲ್ಲಾಗ ಕೂಡದೆಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page