ಕಾರಿನ ಹಿಂಬದಿ ಕುಳಿತು ವೀಡಿಯೋ ಚಿತ್ರೀಕರಣ: ಚಾಲಕನ ಲೈಸನ್ಸ್ ಅಮಾನತು

ಕಾಸರಗೋಡು: ವಿವಾಹ ಸಂಭ್ರಮದ ಅಂಗವಾಗಿ ಕಾರಿನ ಬೂಟ್‌ಲೀಡ್ ಭಾಗವನ್ನು ತೆರೆದು ವೀಡಿಯೋ ಚಿತ್ರೀಕರಿಸಿದ ಹಿನ್ನೆಲೆಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ಚಾಲನಾ ಪರವಾನಗಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೂ ಹಾಗೂ ಇತರರಿಗೆ ಅಪಾಯಕರವಾದ ರೀತಿಯಲ್ಲಿ ವಾಹನ ಚಲಾಯಿಸುವುದರ ದೃಶ್ಯ ಸಹಿತವಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ. ಆದಿತ್ಯವಾರ ಅಪರಾಹ್ನ ೨.೪೫ಕ್ಕೆ ರಾಷ್ಟ್ರೀಯ ಹೆದ್ದಾರಿ ಪೆರಿಯಾಟಡ್ಕ ಭಾಗದಲ್ಲಿ ಘಟನೆ ನಡೆದಿದೆ.

ವಿವಾಹದಂಗವಾಗಿ ಕಾರಿನ ಬೂಟ್‌ಲೀಡ್ ಭಾಗವನ್ನು ತೆರೆದು ಪ್ರಯಾಣಿಕರು ಅದರಲ್ಲಿ ಕುಳಿತು ಕೊಂಡು  ಹಿಂದೆ ಬರುವ ವಾಹನಗಳ ವೀಡಿಯೋ ಚಿತ್ರೀಕರಿಸಲಾಗಿತ್ತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಟಿಒ ಕಾರು ಚಾಲಕನನ್ನು ಹಾಗೂ ಅದಕ್ಕಾಗಿ ಉಪಯೋಗಿಸಿದ್ದ ಕಾರನ್ನು ಪರಿಶೀಲಿಸಿ ಚಾಲಕನ ಲೈಸನ್ಸ್ ರದ್ದುಪಡಿಸಲಾಗಿದೆ. ಜೊತೆಗೆ ಎಡಪ್ಪಾಳ್‌ನಲ್ಲಿರುವ ಕೇರಳ ಸರಕಾರದ ಅಧೀನದ ಐಡಿಟಿಆರ್ ಎಂಬ ಸಂಸ್ಥೆಗೆ  ಐದು ದಿನದ ತರಬೇತಿಗೆ ತೆರಳಲು ಕೂಡಾ ನಿರ್ದೇಶಿಸಲಾಗಿದೆ. ಈ ಬಗ್ಗೆ ಕಾಸರಗೋಡು ಎನ್‌ಫೋರ್ಸ್‌ಮೆಂಟ್ ಆರ್‌ಟಿಒ ಪಿ. ರಾಜೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page