ಕಾರ್ಮಾರು ಕ್ಷೇತ್ರದಲ್ಲಿ ಏಕಾಹ ಭಜನೆ, ಮಂಡಲ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಬದಿಯಡ್ಕ: ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಅತಿಸುಲಭದ ದಾರಿಯಾಗಿದೆ. ಭಜನೆಯಿಂದ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಿದೆ. ಭಜನೆಯಲ್ಲಿ ಜೊತೆಗೂಡಿದ ಕುಟುಂಬಗಳ ಸದಸ್ಯರು ಎಂದೆAದೂ ಸನ್ಮಾರ್ಗದಲ್ಲಿ ಮುಂದುವರಿಯುವ ವಿಶ್ವಾಸವಿದೆ. ಕುಟುಂಬದೊAದಿಗೆ ಜೊತೆಗೂಡಿ ಭಗವಂತನ ನಾಮಸ್ಮರಣೆಯನ್ನು ಮಾಡಿದಾಗ ಅಲ್ಲಿ ಒಗ್ಗಟ್ಟು ಮೂಡಿಬರಲಿದೆ ಎಂದು ಮದ್ವಾದಿsÃಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯಪಟ್ಟರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗುತ್ತಿರುವ ಏಕಾಹ ಭಜನೆ ಮಂಡಲ ಭಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿರಿಯ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಬೆಳಗಿಸಿ ಶುಭಕೋರಿ ದರು. ಶ್ರೀರಾಮ ಚಂದ್ರಾಪುರ ಮಠದ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಓರ್ವ ಮನುಷ್ಯನ ಮನಸ್ಸಿಗೆ ಸುಖಶಾಂತಿ ನೆಮ್ಮದಿಯಿದ್ದರೆ ಮಾತ್ರ ಸುಖನಿದ್ರೆ, ಉತ್ತಮ ಆರೋಗ್ಯಹೊಂದಲು ಸಾಧ್ಯ ವಿದೆ. ಭಜನೆ, ದೇವಸ್ಥಾನಗಳ ಮೂಲಕ ನಾವು ಅದನ್ನು ಕಂಡುಕೊಳ್ಳಬಹುದು ಎಂದರು. ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾW¥್ಣಬÀರು. ಶ್ರೀಕ್ಷೇ ತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಕಾರ್ಯಾಧ್ಯಕ್ಷ ರಾಮ ಕೆ. ಕಾರ್ಮಾರು, ಶ್ರೀಕ್ಷೇತ್ರದ ಟ್ರಸ್ಟಿ ಗೋಪಾಲ ಭಟ್ ಪಿ.ಎಸ್.ಪಟ್ಟಾಜೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಯುವಕವೃಂದದ ಅಧ್ಯಕ್ಷ ವಿಜಯಕುಮಾರ್ ಕಾರ್ಮಾರು ವಂದಿಸಿದರು. ಸುಂದರಶೆಟ್ಟಿ ಕೊಲ್ಲಂ ಗಾನ ನಿರೂಪಿಸಿದರು. ನಂತರ ಕಂಬಾರು ದುರ್ಗಾಪರಮೇಶ್ವರೀ ಭಜನಾ ಸಂಘದವರಿAದ ಭಜನಾ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

You cannot copy content of this page