ಕಾಸರಗೋಡನ್ನು ಅವಮಾನಗೈದ ಶಾಸಕ ಅನ್ವರ್ ಹೇಳಿಕೆಹಿಂಪಡೆದು ಕ್ಷಮೆಯಾಚಿಸಬೇಕು- ಕೆ. ಶ್ರೀಕಾಂತ್

ಕಾಸರಗೋಡು: ಕಾಸರಗೋ ಡಿನವರಿಗೆ ಪ್ರತಿಕ್ರಿಯೆ ಸಾಮರ್ಥ್ಯ ವಿಲ್ಲವೆಂದು ಆಕ್ಷೇಪಿಸಿರುವ ಶಾಸಕ ಪಿ.ವಿ. ಅನ್ವರ್ ತಮ್ಮ ಹೇಳಿಕೆಯನ್ನು ಹಿಂಪಡೆದು ಜನರಲ್ಲಿ ಕ್ಷಮಾಯಾಚನೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾ. ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ.

ಜಿಲ್ಲೆಯ ಜನರಿಗೆ ಪ್ರತಿಕ್ರಿಯೆ ಸಾಮರ್ಥ್ಯದ ಕುರಿತಾದ ಅಜ್ಞಾನದಿಂದ ಅನ್ವರ್ ಇಡೀ ಕಾಸರಗೋಡಿನವರನ್ನೇ ಅವಹೇಳನ ಗೈದಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಇಲ್ಲಿನ ಜನರು ನಡೆಸಿದ ಸುದೀರ್ಘ ಹೋರಾಟದ ಫಲವಾಗಿಯೇ ಕಾಸರಗೋಡು ಜಿಲ್ಲೆ ರೂಪುಗೊಂಡಿತ್ತು. ಎಂಡೋಸಲ್ಫಾನ್ ನಿಷೇಧ, ಫಸ್ನಾ ಕೊಲೆ ಪ್ರಕರಣ ಹಾಗೂ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗಾಗಿರುವ ಹೋರಾಟದಿಂದಾಗಿ ಪಿಎಸ್‌ಸಿ ಪರೀಕ್ಷೆಯನ್ನೇ ರದ್ದುಪಡಿಸಬೇಕಾಗಿ ಬಂದದ್ದು  ಸೇರಿದಂತೆ ಇತರ ಹಲವು ಚಳವಳಿಗಳಿಗೆ ನೇತೃತ್ವ ನೀಡಿದ ಜಿಲ್ಲೆಯಾಗಿದೆ ಕಾಸರಗೋಡು. ಇಲ್ಲಿನ ಜನರು ನಡೆಸಿದ ಹೋರಾಟಗಳ ಫಲವಾಗಿಯೇ ಎಂಡೋಸಲ್ಫಾನ್ ಪ್ರಯೋಗದ ಮೇಲೆ  ನಿಷೇಧ ಹೇರಲಾಗಿದೆ. ಇದು  ಮಾಧ್ಯಮಗಳ ಮುಂದೆ ನಿಂತು ಜಂಬಕೊಚ್ಚಿಕೊಳ್ಳುವ ರೀತಿಯ ದ್ದಲ್ಲವೆಂದೂ ಶ್ರೀಕಾಂತ್ ಆರೋಪಿಸಿದ್ದಾರೆ. ಜಿಲ್ಲೆಯ ಜನರನ್ನು ಸಂಪೂರ್ಣವಾಗಿ ಅಪಮಾನಗೈದ ಅನ್ವರ್  ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮಾಯಾಚನೆ ನಡೆಸಬೇಕು. ಈ ವಿಷಯದಲ್ಲಿ ಜಿಲ್ಲೆಯ ಇತರ ರಾಜಕೀಯ ಪಕ್ಷಗಳ ಹಾಗೂ ಜನಪ್ರತಿನಿಧಿಗಳ ನಿಲುವೇ ನೆಂಬುದನ್ನು ವ್ಯಕ್ತಪಡಿಸಬೇಕೆಂದೂ  ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page