ಕಾಸರಗೋಡಿನಲ್ಲಿ ಕೇರಳ ವಿಜ್ಞಾನ ಕಾಂಗ್ರೆಸ್ ಮುಖ್ಯಮಂತ್ರಿ ಉದ್ಘಾಟನೆ
ಕಾಸರಗೋಡು: ಜಾನುವಾರು ಮತ್ತಿತರ ಜೀವಿಗಳಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು ಜನರ ಆರೋಗ್ಯದ ಮೇಲೆ ಮಾತ್ರವಲ್ಲ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಯೋ ಜನೆಯನ್ನು ೨೦೨೧ರಲ್ಲೇ ರೂಪು ನೀಡಲಾಗಿದೆ. ಅದರಂತೆ ಪ್ರಾಥಮಿಕ ಹಂತದಲ್ಲಿ ಇದನ್ನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಾಗಿ ಜ್ಯಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ೩೬ನೇ ಕೇರಳ ವಿಜ್ಞಾನ ಕಾಂಗ್ರೆಸ್ನ್ನು ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಐಸಿಸಿಎಸ್ ತಯಾರಿಸಿದ ಕ್ಲೈಮೆಟ್ ‘ಸ್ಟೇಟ್ಮೆಂಟ್ ೨೦೨೩’ನ್ನು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಪ್ರಕಾಶನಗೈದರು.