ಕಾಸರಗೋಡು ಉಪಜಿಲ್ಲಾ ಕಲೋತ್ಸವ ನಾಯಮ್ಮಾರ್‌ಮೂಲೆ ಶಾಲೆ ತಂಡದ ಸಾಧನೆ
ಕಾಸರಗೋಡು: ಕಳೆದ ಐದು ದಿನ ಗಳಿಂದ ಇರಿಯಣ್ಣಿ ಜಿವಿಎಚ್ ಎಸ್‌ಎಸ್‌ನಲ್ಲಿ ನಡೆದ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ನಾಯಮ್ಮಾರ್ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ ಮಾಡಿದೆ. ಓವರೋಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಯುಪಿ, ಹೈಸ್ಕೂಲ್ ಅರಬಿ ಕಲೋತ್ಸವದಲ್ಲಿ ಚಾಂಪ್ಯನ್ ಆಗಿದೆ. ಸಮಗ್ರ ವಿಭಾಗದಲ್ಲಿ ೩೫೭ ಅಂಕ, ಯುಪಿ ಅರಬಿಯಲ್ಲಿ ೬೫ ಅಂಕ, ಹೈಸ್ಕೂಲ್ ಅರಬಿ ಕಲೋತ್ಸವದಲ್ಲಿ ೯೧ ಅಂಕ ಗಳಿಸಿದೆ. ಅಲ್ಲದೆ ವಿವಿಧ ಅರಬಿ ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಎ ಗ್ರೇಡ್ ಗಳಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಶಾಲಾ ಮೆನೇಜ್‌ಮೆಂಟ್, ಪಿಟಿಎ ಅಭಿನಂದಿಸಿದೆ. ಹರ್ಷ ಮೆರವಣಿಗೆ ನಡೆಸಲಾಯಿತು.