ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಚೇರಿ ಉದ್ಘಾಟನೆ
ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಪ್ರಧಾನ ಕಚೇರಿಯ ನೂತನ ಕಟ್ಟಡ ತೂಮಿನಾಡಿನಲ್ಲಿ ಉದ್ಘಾಟನೆ ಗೊಂಡಿತು. ಸಂಘದ ಕಚೇರಿಯನ್ನು ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಅಶೋಕನಗರ ಉದ್ಘಾಟಿಸಿ ದರು. ಕುಲಾಲ ಸಂಘ ಕಟ್ಟಡ ಸಮಿತಿ ಕೋಶಾಧಿಕಾರಿ ಗೋಪಾಲ ಸಾಲ್ಯಾನ್ ಕುಂಜತ್ತೂರು ದೀಪಪ್ರಜ್ವಲನೆ ನೆರವೇರಿ ಸಿದರು. ಮುಖ್ಯ ಅತಿಥಿಗಳಾಗಿ ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀ ಕಾಕ್ಷ ಕೈರಂಗಳ, ಅಡ ಕುಲಾಲ ಬಂಗೇರ ಮೂಲಸ್ಥಾನದ ಮೂಲ್ಯಣ್ಣ ಹರೀಶ್ ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಬಾಲಕೃಷ್ಣ ದೀಕ್ಷಾಕುಂಜತ್ತೂರು, ಲೀಲಾವತಿ ಟೀಚರ್ ತಲಪಾಡಿ ಭಾಗವಹಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧಕ್ಷತೆ ವಹಿಸಿದರು. ಶ್ರೀ ನಾಗಮೂಲ ಭಜನಾ ಮಂಡಳಿ ಅಡ್ಕ ಕುಂಜತ್ತೂರು ಇವರಿಂದ ಭಜನಾ ಕಾರ್ಯಕ್ರಮ ಜರಗಿತು. ಸುಮಾರು ೧೫೦ ಮಂದಿ ಕುಲಾಲ ಸಮಾ ಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು ಕಚೇರಿ ಉದ್ಘಾಟನಾ ಸಹಾಯಾರ್ಥ ಹಮ್ಮಿ ಕೊಂಡ ಅದೃಷ್ಟ ನಿಧಿ ಕೂಪನ್ನ ಡ್ರಾ ನಡೆಯಿತು. ಜಿಲ್ಲಾ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಕುಲಾಲ್ ವರ್ಕಾಡಿ ನಿರೂಪಿಸಿದರು.