ಕಾಸರಗೋಡು ನಗರಸಭೆಯ ಸ್ವಜನ ಪಕ್ಷಪಾತ ಆಡಳಿತ ಆರೋಪಿಸಿ ಬಿಜೆಪಿಯಿಂದ ದೊಂದಿ ಮೆರವಣಿಗೆ
ಕಾಸರಗೋಡು: ಕಾಸರಗೋಡು ನಗರಸಭೆಯಲ್ಲಿ ಸ್ವಜನ ಪಕ್ಷಪಾತ ಆಡಳಿತ ನಡೆಯುತ್ತಿದೆ, ಅಭಿವೃದ್ಧಿ ಕುಂಟಿತಗೊಂಡಿದೆ, ಕಚೇರಿಯ ಕೆಲಸ ಕಾರ್ಯಗಳು ಮಂದಗತಿ ಯಲ್ಲಿ ಸಾಗುತ್ತಿವೆ, ಭ್ರಷ್ಟಾಚಾರದ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಸರಗೋಡು ನಗರಸಮಿತಿ ನೇತೃತ್ವದಲ್ಲಿ ದೊಂದಿ ಉರಿಸಿ ಪ್ರತಿಭಟನೆ ನಡೆಸಲಾಯಿತು. ಕಾಸರಗೋಡು ನಗರದ ಹೃದಯ ಭಾಗವಾದ ಕರಂದಕ್ಕಾಡ್‌ನಿಂದ ತಾಳಿಪಡ್ಪುವರೆಗಿನ ಪ್ರದೇಶ ಸಂಪೂರ್ಣ ಕತ್ತಲೆಯಿಂದ ಮುಳುಗಿದೆ. ಇದು ನಗರಸಭೆಯ ದುರಾಡಳಿತಕ್ಕೆ ಜಲಂತ ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ. ಹೆದ್ದಾರಿ ನಿರ್ಮಾಣದ ನೆಪ ಹೇಳಿ ಕಾಸರಗೋಡು ನಗರಸಭೆ ತನ್ನ ಕರ್ತವ್ಯದಿಂದ ಜಾರಿಕೊಳ್ಳುತ್ತಿದೆ. ಕೆಟ್ಟು ಹೋದ ದಾರಿ ದೀಪಗಳನ್ನು ಕೂಡಾ ದುರಸ್ತಿಗೊಳಿಸಲು ನಗರಸಭೆ ಮುಂದಾಗುತ್ತಿಲ್ಲ. ಕತ್ತಲೆ ಆವರಿಸಿರು ವುದರಿಂದ ಜನರಿಗೆ ನಡೆದಾಡಲು ಆಗದಂತಹ ಸ್ಥಿತಿ ಉಂಟಾಗಿದೆ. ವೇಗದಲ್ಲಿ ಆಗಮಿಸುವ ವಾಹನಗ ಳಿಂದ ಅಪಾಯ ಭೀತಿ ಎದುರಾ ಗುತ್ತಿದೆ. ಜನಸಾಮಾನ್ಯರ ಜೀವಕ್ಕೂ ಬೆಲೆ ಕೊಡದ ನಗರಸಭೆಯ ಸ್ಥಿತಿ ಖಂಡನೀಯವೆಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಮುಂದಿನ ದಿನಗಳಲ್ಲಿ ಈ ನಿರ್ಲಕ್ಷ್ಯ ನೀತಿಯನ್ನು ಬದಲಾಯಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವು ದಾಗಿಯೂ ಬಿಜೆಪಿ ತಿಳಿಸಿದೆ.