ಕುಂಬಳ ಉಪಜಿಲ್ಲಾ ಶಾಲಾ ಮೇಳ: ಪುತ್ತಿಗೆ ಶಾಲೆಯಿಂದ ವಿಜಯೋತ್ಸವ ಮೆರವಣಿಗೆ
ಪುತ್ತಿಗೆ: ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನಮೇಳ, ಅರಬಿಕ್ ಕಲಾ ಮೇಳ ಎಂಬಿವುಗಳಲ್ಲಿ ಸಮಗ್ರ ಪಟ್ಟ ಗಳಿಸಿದ ಪುತ್ತಿಗೆ ಎಜೆಬಿ ಶಾಲೆಯ ವಿಜಯೋತ್ಸವ ಮೆರ ವಣಿಗೆ ನಡೆಯಿತು. ಸೀತಾಂಗೋಳಿ ಪೇಟೆಯಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಅಧ್ಯಾಪಕರು ಸಹಿತ ನೂರಾರು ಮಂದಿ ಭಾಗವಹಿಸಿದರು. ಮುಖ್ಯೋಪಾಧ್ಯಾಯಿನಿ ಆರ್. ಸಿಂಧು, ಪಿಟಿಎ ಅಧ್ಯಕ್ಷ ಜುನೈದ್ ಉರುಮಿ, ಎಂಪಿಟಿಎ ಅಧ್ಯಕ್ಷ ರಂಲ, ಉಪಾಧ್ಯಕ್ಷೆ ನಸೀರ, ಅಧ್ಯಾಪಕರು ನೇತೃತ್ವ ನೀಡಿದರು.