ಕುಂಬಳೆ ಪಂಚಾಯತ್ ಫಂಡ್ ಲಪಟಾವಣೆ : ಪಂ. ಆಡಳಿತ ಸಮಿತಿ ತುರ್ತು ಸಭೆಯಲ್ಲಿ ಗದ್ದಲ; ಪಂಚಾಯತ್ ಅಧ್ಯಕ್ಷೆ ರಾಜೀನಾಮೆಗೆ ವಿಪಕ್ಷ ಒತ್ತಾಯ
ಕುಂಬಳೆ: ಕುಂಬಳೆ ಪಂಚಾಯತ್ ಫಂಡ್ನಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಪಂಚಾಯತ್ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ಒತ್ತಾಯಿಸಿದ್ದಾರೆ. ಮಾತ್ರವಲ್ಲ ಪಂಚಾಯತ್ನ ಖಜಾನೆಯ ಕಾವಲುಗಾರರು ನೋಡಿ ನಿಂತಿದ್ದಾಗಲೇ ನಡೆದ ವಂಚನೆಯ ಕುರಿತು ವಿಜಿಲೆನ್ಸ್ ತನಿಖೆ ನಡೆಸಬೇಕೆಂದು ವಿಪಕ್ಷ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಮಸ್ಯೆಯಲ್ಲಿ ಪಂ ಚಾಯತ್ ಆಡಳಿತ ನಾಯಕತ್ವ ನಿರ್ಲಕ್ಷ್ಯ ವಹಿಸುತ್ತಿದೆಯೆಂದು ಆರೋಪಿಸಿದ ವಿಪಕ್ಷ ಸದಸ್ಯರು ಸಭೆಯಿಂದ ಮರಳಿದರು. ಬುಧವಾರ ಸಂಜೆ ಕುಂಬಳೆ ಪ್ರೆಸ್ ಫಾರಂನಲ್ಲಿ ಪಂ. ಅಧ್ಯಕ್ಷೆ ಹಾಗೂ ಆಡಳಿತ ಪಕ್ಷದ ಸದಸ್ಯರು ಈ ವಿಷಯವನ್ನು ವಿವರಿಸಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒಂದು ವರ್ಷದಲ್ಲಿ ಹಲವು ಬಾರಿಯಾಗಿ 1104959 ರೂಪಾಯಿಗಳನ್ನು ಹಲವರ ಹೆಸರುಗಳಲ್ಲಿ ಪಂ. ಫಂಡ್ನಿಂದ ಚೆಕ್ ಬರೆದು ತೆಗೆದಿರುವುದಾಗಿ ಲಿಖಿತವಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ ಈ ವಿಷಯದ ಕುರಿತು ಚರ್ಚೆ ನಡೆಸಲು ಸೇರಿದ ಪಂ. ಆಡಳಿತ ಸಮಿತಿ ತುರ್ತು ಸಭೆಯಲ್ಲಿ ಐದು ಲಕ್ಷ ರೂಪಾಯಿ ಗಳನ್ನು ಅಪಹರಿಸಲಾಗಿದೆಯೆಂದು ಹೊಣೆಗಾರಿಕೆ ಯುಳ್ಳವರು ತಿಳಿಸುತ್ತಿದ್ದಾರೆ. ನಾಳೆ ಏನೂ ನಷ್ಟಗೊಂಡಿಲ್ಲವೆಂದು ಇವರೇ ಹೇಳ ಲಾರರು ಎಂಬುದಕ್ಕೆ ಏನು ಸಾಕ್ಷಿ ಎಂದು ಬಿಜೆಪಿ ಸದಸ್ಯ ಮೋಹನ ಸಭೆಯಲ್ಲಿ ಪ್ರಶ್ನಿಸಿದರು. ಈ ರೀತಿ ಲಪಟಾಯಿ ಸಲ್ಪಟ್ಟಿರುವುದು ಜನರ ಹಣವಾಗಿದೆ. ಖಜಾನೆಯ ಕಾವಲುಗಾರರಾದ ಆಡಳಿತಾಧಿಕಾರಿ ಗಳು ಇಷ್ಟು ಕಾಲದಿಂದ ನಡೆದ ಕೊಳ್ಳೆಯ ಕುರಿತು ಯಾವ ಕ್ರಮ ಕೈಗೊಂಡಿದ್ದಾರೆ? ವಿಜಿಲೆನ್ಸ್ಗೆ ದೂರು ನೀಡಲಾಗಿದೆಯೇ? ದೂರು ನೀಡ ಲಾಗಿದೆಯೆಂದು ತಿಳಿಸಿದ ಪಂಚಾಯತ್ ಅಧ್ಯಕ್ಷೆಯೊಂದಿಗೆ ಅದರ ರಶೀದಿ ತೋರಿಸಬೇಕೆಂದು ಮೋಹನನ್ ಆಗ್ರಹ ಪಟ್ಟಾಗ ಅಧಿಕಾರಿಗಳು ಮೌನವಾಗಿದ್ದರು. ಅಲ್ಪ ಹೊತ್ತಿನ ಬಳಿಕ ಇದ್ಯಾವುದೂ ನಮಗೆ ತಿಳಿದಿಲ್ಲವೆಂದು ನಿರ್ಲಕ್ಷ್ಯ ವಹಿಸಿದ್ದಾರೆ. ಪಂ.ನಿಂದ ಹಣ ಖರ್ಚುಮಾಡಬೇ ಕಾಗಿದ್ದಲ್ಲಿ ಖಾತೆಯ ಚೆಕ್ ಬರೆದು ಅದು ಯಾಕಾಗಿ ಯಾರಿಗೆ ನೀಡಲಾಗಿದೆ ಯೆಂಬುವುದರ ದಾಖಲೆಗಳನ್ನು ಪಂ. ಕಾರ್ಯದರ್ಶಿಗೆ ನೀಡಬೇಕು. ಅಧ್ಯಕ್ಷರ ಲಿಖಿತ ಅನುಮತಿ ಬಳಿಕವೇ ಚೆಕ್ನ್ನು ಸಂಬಂಧಪಟ್ಟ ವ್ಯಕ್ತಿಗೆ ಬದಲಾಯಿಸಬೇಕಾ ಗಿದೆಯೆಂಬ ವ್ಯವಸ್ಥೆ ಇರುವಾಗಲೇ ಹಲವು ತಿಂಗಳಿಂದ ಲಕ್ಷಾಂತರ ರೂಪಾಯಿ ಪಂಚಾಯತ್ ಫಂಡ್ನಿಂದ ಲಪಟಾಯಿಸಿದರೂ ಸೆಕ್ರೆಟರಿ ಹಾಗೂ ಅಧ್ಯಕ್ಷೆ ತಿಳಿದಿಲ್ಲವೆಂದು ಹೇಳಿದರೆ ಏನು ಅರ್ಥವೆಂದು ಮೋಹನ ಪ್ರಶ್ನಿಸಿದರು. ವಂಚನೆಯನ್ನು ಪತ್ತೆಹಚ್ಚಬೇಕಾದುದು ಆಡಿಟ್ನವರ ಕೆಲಸವಾಗಿದೆಯೆಂದು ಅಧ್ಯಕ್ಷೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪಂಚಾಯತ್ ಫಂಡ್ ಕೊಳ್ಳೆಗೆ ಸಂಬಂಧಿಸಿ ಆಡಳಿತಾಧಿಕಾರಿಗಳು ಏನನ್ನೋ ಮುಚ್ಚಿಡುತ್ತಿದ್ದಾರೆಂದೂ ಈ ವಿಷಯದಲ್ಲಿ ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ವಂಚನೆ ವಿಜಿಲೆನ್ಸ್ ತನಿಖೆ ನಡೆಸಿ ಆ ಮೂಲಕ ವಂಚನೆ ಯಲ್ಲಿ ಭಾಗಿಯಾದವರನ್ನು ಕಾನೂನಿನ ಮುಂದೆ ಹಾಜರುಪಡಿಸಬೇಕೆಂದು ಅವರು ಒತ್ತಾಯಿಸಿದರು. ಪಂಚಾ ಯತ್ನ ಫಂಡ್ ವಂಚನೆ ವಿರುದ್ಧ ಮುಂದೆ ನಡೆಸಬೇಕಾದ ಚಳವಳಿಗಳ ಕುರಿತು ಸಮಾ ಲೋಚನೆ ನಡೆಸಲು ಪಕ್ಷದ ಪಂಚಾ ಯತ್ ಸಮಿತಿ ಸಭೆ ಇಂದು ನಡೆಯಲಿದೆ ಎಂದು ಬಿಜೆಪಿ ಸದಸ್ಯರು ತಿಳಿಸಿದ್ದಾರೆ.