ಕುಂಬಳೆ ಪೇಟೆಗೆ ದಾರಿ ಮೊಟಕು: ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮುಖಂಡರು ಭೇಟಿ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾದಾಗ ಜಿಲ್ಲೆಯ ಎಲ್ಲಾ ಪೇಟೆಗಳೂ ಅಭಿವೃದ್ಧಿಯಾಗಿದ್ದರೆ ಕುಂಬಳೆ ಪೇಟೆಯಲ್ಲಿ ಮಾತ್ರ ದಾರಿ ಮುಚ್ಚಿದ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ನಿರ್ಮಾಣ ಪ್ರಗತಿಯಲ್ಲಿರುವಾಗ ಸೂಕ್ತ ರೀತಿಯಲ್ಲಿ ಜವಾಬ್ದಾರಿ ಹೊಂದಿದವರು ಹಸ್ತಕ್ಷೇಪ ನಡೆಸದಿರುವುದೇ ಕುಂಬಳೆ ಪೇಟೆಗೆ ಈ ರೀತಿಯ ಸಂಕಷ್ಟ ಉಂಟಾ ಗಲು ಕಾರಣವೆಂದು ಅಶ್ವಿನಿ ಆರೋಪಿ ಸಿದರು. ಪೇಟೆಯ ಸಂಚಾರ ಸಂಕಷ್ಟವನ್ನು ಸ್ವತಃ ಕಾಣಲು ಕುಂಬಳೆಗೆ ತಲುಪಿದ ಎಂ.ಎಲ್. ಅಶ್ವಿನಿ ಸ್ಥಳೀಯರು, ವ್ಯಾಪಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಂಘಸಂಸ್ಥೆಗಳ ಕಾರ್ಯ ಕರ್ತರೊಂದಿಗೆ ಮಾತನಾಡಿದರು.
ಕೊನೇ ಹಂತದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂಬ ರೀತಿಯಲ್ಲಿ ತನಗೆ ಮಾಡಲು ಸಾಧ್ಯವಿರುವುದನ್ನು ದೆಹಲಿಗೆ ತೆರಳಿಯಾದರೂ ಮಾಡಲು ಯತ್ನಿಸುವೆನೆಂದು ಅಶ್ವಿನಿ ಸ್ಥಳೀಯರಿಗೆ ಭರವಸೆ ನೀಡಿದರು. ಇವರ ಜೊತೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಪ್ರದೀಪ್, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಕುಂಬಳೆ ಪಂಚಾಯತ್ ಸದಸ್ಯರಾದ ವಿದ್ಯಾ ಪೈ, ಅಜಯನ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ ಮಾಜಿ ಅಧ್ಯಕ್ಷ ವಿಕ್ರಮ್ ಪೈ, ಕುಂಬಳೆ ಬದರ್ ಜುಮಾ ಮಸೀದಿ ಕಾರ್ಯದರ್ಶಿ ಮಮ್ಮು ಮುಬಾರಕ್, ಕೋಶಾಧಿಕಾರಿ ಅಬ್ದುಲ್ಲ ತಾಜ್, ಕೆ.ಎಸ್. ಶಮೀರ್, ಅಹಮ್ಮದಲಿ ಕುಂಬಳೆ, ಅಬ್ದುಲ್ಲ ಕುಂಬಳೆ, ಹಮೀದ್ ಕಾವಿಲ್, ಬಿ.ಎಂ. ಸಿದ್ದಿಕ್ ಇಬ್ರಾಹಿಂ, ಮೊಯ್ದೀನ್ ಕುಂಞಿ ಕಡವತ್, ಎಂ.ಎ. ಮೂಸಾ ಮೊಗ್ರಾಲ್ ಸಹಿತ ಹಲವರು ಭಾಗವಹಿಸಿದರು.