ಕುಂಬಳೆ ಬಸ್ ನಿಲ್ದಾಣದಲ್ಲಿ ಅವ್ಯವಹಾರ: ತನಿಖೆಗೆ ಬಿಜೆಪಿಯಿಂದ ಕಾರ್ಯದರ್ಶಿಗೆ ಮನವಿ

ಕುಂಬಳೆ: ಕುಂಬಳೆ ಬಸ್ ನಿಲ್ದಾಣ ನಿರ್ಮಾಣದಲ್ಲಿ ವ್ಯಾಪಕ ಅವ್ಯವಹಾರ ಹಾಗೂ ಭ್ರಷ್ಟಾಚಾರ ಆರೋಪ ಮೂಡಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕುಂಬಳೆ ಪಂಚಾಯತ್ ಬಿಜೆಪಿ ನಿಯೋಗ ಪಂಚಾಯತ್ ಕಾರ್ಯದರ್ಶಿಗೆ ಮನವಿ ನೀಡಿದೆ. ಬಸ್ ನಿಲ್ದಾಣಕ್ಕಾಗಿ ಯಾವುದೇ ಮೊತ್ತ ಮಂಜೂರು ಮಾಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಹಲವು ವರ್ಷಗಳಿಂದ ಉಪಯೋಗಿಸುತ್ತಿದ್ದ ಬಸ್ ನಿಲ್ದಾಣ ಕಟ್ಟಡ ಶೋಚನೀಯಗೊಂಡ ಹಿನ್ನೆಲೆಯಲ್ಲಿ ಮುರಿದು ತೆಗೆಯಲಾಗಿತ್ತು.  ಆ ಬಳಿಕ ಬಸ್ ನಿಲ್ದಾಣವಿಲ್ಲದೆ ಸಂಕಷ್ಟಪಡುತ್ತಿದ್ದು ಈಗ ನೂತನ ಬಸ್ ಶೆಲ್ಟರ್ ನಿರ್ಮಿಸಿದ ಆಡಳಿತ ಮಂಡಳಿ ಅದರಲ್ಲಿ ಭ್ರಷ್ಟಾಚಾರ ನಡೆಸಿರುವು ದಾಗಿ ಆರೋಪ ಮೂಡಿಬಂದಿದೆ. ಈ ಬಗ್ಗೆ ಮನವಿ ನೀಡಿದ ನಿಯೋಗದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣ ಉತ್ತರ ವಲಯ ಅಧ್ಯಕ್ಷರಾದ ಸುಜಿತ್ ರೈ, ಪ್ರಸಾದ್ ರೈ ಮಡ್ವ, ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ಪಂ. ಸzಸ್ಯರಾದ ಸುಲೋಚನ, ಮೋಹನ ಕೆ. ಬಂಬ್ರಾಣ, ಪ್ರೇಮಲತಾ, ಅಜಯ್ ಉಪಸ್ಥಿತರಿದ್ದರು.

You cannot copy contents of this page