ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಕಠಿಣ ಕ್ರಮ, ಕಚೇರಿ ಸ್ಥಳಾಂತರಿಸಲು, ಹಣ ಮಂಜೂರು ಮಾಡಲು ಸಹಕಾರಿ ಇಲಾಖೆ ನಿರಾಕರಣೆ
ಕುಂಬಳೆ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಸರಿಯೆಂದು ಸಹಕಾರಿ ಇಲಾಖೆ ತಿಳಿಸಿದೆ. ಸೊಸೈಟಿಯ ಡೈರೆಕ್ಟರ್ ಆಗಿದ್ದ ವಿಕ್ರಂ ಪೈ ಸಹಕಾರಿ ಅಸಿ ಸ್ಟೆಂಟ್ ರಿಜಿಸ್ಟ್ರಾರ್ ಆಫೀಸ್‌ನಿಂದ ಮಾಹಿತಿ ಹಕ್ಕು ಪ್ರಕಾರ ಪಡೆದ ಮಾಹಿತಿಯಲ್ಲಿ ಈ ವಿಷಯವನ್ನು ತಿಳಿಸಲಾ ಗಿದೆ. ಕುಂಬಳೆ ಸಹಕಾರಿ ಭವನದಲ್ಲಿ ಕಾರ್ಯಾಚರಿಸುವ ಮರ್ಚೆಂಟ್ಸ್ ವೆಲ್ಫೇರ್ ಸೊಸೈಟಿ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲು ಒಪ್ಪಂದ ಮಾಡಿಕೊಂಡಿದ್ದು, ಆ ಮೂಲಕ ಹತ್ತು ಲಕ್ಷದಷ್ಟು ರೂಪಾಯಿಗಳ ನಿರ್ಮಾಣ ಚಟುವಟಿP ಗಳು ನಡೆಯುತ್ತಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಈ ಕುರಿತಾಗಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫೀಸ್‌ನ ಇನ್ ಫರ್ಮೇಶನ್ ಆಫೀಸರ್ ಈ ಬಗ್ಗೆ ತಿಳಿಸಿದ್ದಾರೆ. ಮರ್ಚೆಂ ಟ್ಸ್ ವೆಲ್ಫೇರ್ ಸೊಸೈಟಿಯನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲು ಸಹಕಾರಿ ಇಲಾಖೆ ಯಾರಿಗೂ ಅನುಮತಿ ನೀಡಿಲ್ಲವೆಂದು ತಿಳಿಸಲಾಗಿದೆ. ಆದರೆ ಈ ಕುರಿತಾಗಿ ಸೊಸೈಟಿ ಒಂದು ಅರ್ಜಿಯನ್ನು ನೀಡಿತ್ತು. ಅದನ್ನು ಜೋ ಯಿಂಟ್ ರಿಜಿಸ್ಟ್ರಾರ್‌ಗೆ ಹಸ್ತಾಂತರಿಸಲಾಗಿದೆ. ಸೊಸೈಟಿ ಈಗ ಕಾರ್ಯಾಚರಿಸುವ ಕಟ್ಟಡದ ವಿಸ್ತೀರ್ಣ, ಬಾಡಿಗೆ ಮಾಹಿತಿಗಳನ್ನು ಅಸಿಸ್ಟೆಂಟ್ ರಿಜಿಸ್ಟ್ರಾರ್‌ಗೆ ತಿಳಿಸಿಲ್ಲ. ಇದಕ್ಕಾಗಿ ಹಣ ಖರ್ಚು ಮಾಡಲು ಸಹಕಾರಿ ಇಲಾಖೆ ಅನುಮತಿ ನೀಡಿಲ್ಲ. ಇದೇ ಸಹಕಾರಿ ಸೊಸೈಟಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ೧೪ ಲಕ್ಷ ರೂಪಾಯಿ ಇತ್ತೀಚೆಗೆ ಬರ್ಖಾಸ್ತುಗೊಳಿಸಿದ ಆಡಳಿತ ಸಮಿತಿ ಖರ್ಚು ಮಾಡಿದೆಯೆಂಬ ವ್ಯಾಪಕ ಆರೋಪ ಕೇಳಿಬಂದಿದೆ. ಸೊಸೈಟಿಯ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿ ಯೂ ಗಂಭೀರ ಆರೋಪಗಳಿವೆ. ಈ ಕುರಿತು ಕೇಸು ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿರುವ ಮಧ್ಯೆ ಆರೋಪಗಳಲ್ಲಿ ಸತ್ಯಾವಸ್ಥೆಯಿದೆಯೆಂದು ಅಸಿಸ್ಟೆಂಟ್ ರಿಜಿಸ್ಟ್ರಾರ್‌ರ ಕಚೇರಿಯಿಂದ ತಿಳಿಸಲಾಗಿದೆ.