ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧ ಸ್ನೇಹಾಲಯಕ್ಕೆ
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧನನ್ನು ಮಂಜೇಶ್ವರ ಸ್ನೇಹಾಲಯಕ್ಕೆ ತಲುಪಿಸಲಾಯಿತು.
ನಿನ್ನೆ ಸಂಜೆ ೫ ಗಂಟೆ ವೇಳೆ ರೈಲ್ವೇ ನಿಲ್ದಾಣದ ನೂತನವಾಗಿ ನಿರ್ಮಿಸುವ ವಿಶ್ರಾಂತಿ ಕೊಠಡಿಯಲ್ಲಿ ವೃದ್ಧ್ಧ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಟೋ ಚಾಲಕರು ಸೇರಿ ಎಬ್ಬಿಸಲು ಯತ್ನಿಸಿ ದರೂ ಸಾಧ್ಯವಾಗಲಿಲ್ಲ. ಅನಂತರ ಕುಂಬಳೆ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ತಲುಪಿದ ಬಳಿಕ ವೃದ್ಧನನ್ನು ವಿಚಾರಿಸಿದಾಗ ತಲಶ್ಶೇರಿ ನಿವಾಸಿಯೆಂದು ತಿಳಿದು ಬಂತು. ಹೆಸರು ಮೋಹನನ್ ಎಂದೂ, ೬೫ ವರ್ಷ ಪ್ರಾಯವಾಗಿ ದೆಯೆಂದು ತಿಳಿಸಲಾಯಿತು. ಈ ವ್ಯಕ್ತಿ ಕುಂಬಳೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಪೊಲೀಸರು ಹಾಗೂ ಆಟೋ ಚಾಲಕರು ಸೇರಿ ವೃದ್ಧನನ್ನು ಮಂಜೇಶ್ವರ ಸ್ನೇಹಾಲಯಕ್ಕೆ ತಲುಪಿಸಿದರು. ವೃದ್ಧನ ಸಂಬಂಧಿಕರ ಪತ್ತೆಗಾಗಿ ಪೊಲೀಸರು ಪ್ರಯತ್ನ ಆರಂಭಿಸಿದ್ದಾರೆ.