ಕುಂಬಳೆ ಸರಕಾರಿ ಶಾಲೆ ರಸ್ತೆಯಲ್ಲಿ ತ್ಯಾಜ್ಯ ರಾಶಿ : ಕೊಳೆತರೆ ದುರ್ಗಂಧದಿಂದ ಸಮಸ್ಯೆ ಸೃಷ್ಟಿ
ಕುಂಬಳೆ: ಊರಿಡೀ ಸ್ವಚ್ಛತೆಗಾಗಿ ಶಬ್ದವೆತ್ತುತ್ತಿರುವ ವೇಳೆ ಕುಂಬಳೆಯಲ್ಲಿ ತ್ಯಾಜ್ಯವನ್ನು ರಾಶಿ ಹಾಕಿ ಪರಿಸರ ಮಲೀನೀಕರಣ ನಡೆಸಲಾಗುತ್ತಿದೆ ಎಂದು ಆರೋಪವಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ತೆರಳುವ ರಸ್ತೆ ಬದಿಯಲ್ಲಿ ವ್ಯಾಪಾರಿಗಳೇ ಈ ತ್ಯಾಜ್ಯವನ್ನು ಇಲ್ಲಿ ತಂದು ಹಾಕುತ್ತಿರುವುದಾಗಿ ಪರಿಸರದವರು ದೂರುತ್ತಾರೆ. ಕಳೆದ ೧೫ ದಿನದ ಹಿಂದೆ ಹಸಿರು ಕ್ರಿಯಾಸೇನೆ ಕಾರ್ಯ ಕರ್ತೆಯರು ಈ ಪರಿಸರವನ್ನು ಶುಚೀಗೊಳಿಸಿದ್ದರು. ಅದರ ಬಳಿಕ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ತ್ಯಾಜ್ಯಗಳು ಹೆಚ್ಚಾಗಿದ್ದು, ಇದನ್ನೆಲ್ಲಾ ವ್ಯಾಪಾರಿಗಳು ಇಲ್ಲಿ ತಂದು ಉಪೇಕ್ಷಿಸಿರುವುದಾಗಿ ಹೇಳಲಾಗುತ್ತಿದೆ.
ಇದರಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ಹಣ್ಣುಹಂಪಲುಗಳ ಕೊಳೆತ ತ್ಯಾಜ್ಯಗಳು ಕಂಡು ಬರುತ್ತಿದೆ. ಮಳೆ ಸುರಿದರೆ ಇದೆಲ್ಲ ಕೊಳೆತು ದುರ್ಗಂಧವುಂಟಾಗಲಿದ್ದು, ಪರಿಸರದಲ್ಲಿ ಸಮಸ್ಯೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.