ಕುಂಬಳೆಯಲ್ಲಿ ನಿರಂತರ ವಿದ್ಯುತ್ ಮೊಟಕು : ಮುಸ್ಲಿಂ ಲೀಗ್‌ನಿಂದ ಕೆಎಸ್‌ಇಬಿ ಕಚೇರಿಗೆ ಮಾರ್ಚ್
ಕುಂಬಳೆ: ಕುಂಬಳೆ ಪೇಟೆ ಹಾಗೂ ಪರಿಸರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಮೊಟಕುಗೊಳ್ಳು ತ್ತಿರುವುದನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್ ಕುಂಬಳೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನಿನ್ನೆ ಕುಂಬಳೆ ಕೆಎಸ್‌ಇಬಿ ಕಚೇರಿಗೆ ಮಾರ್ಚ್ ನಡೆಸಲಾಯಿತು. ಕುಂಬಳೆ ಲೀಗ್ ಕಚೇರಿ ಬಳಿಯಿಂದ ಹೊರಟ ಮೆರವಣಿಗೆಗೆ ಕೆಎಸ್‌ಇಬಿ ಕಚೇರಿ ಬಳಿ ಪೊಲೀಸರು ತಡೆಯೊಡ್ಡಿದರು.
ಮಾರ್ಚ್ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕೆಎಸ್‌ಇಬಿಯ ನಿರ್ಲಕ್ಷ್ಯವೇ ಪದೇ ಪದೇ ವಿದ್ಯುತ್ ಮೊಟಕುಗೊಳ್ಳಲು ಕಾರಣವಾಗಿದೆ. ಇದನ್ನು ಇನ್ನು ಕೂಡಾ ಸಹಿಸಲು ಸಾಧ್ಯವಿಲ್ಲವೆಂದು ಶಾಸಕ ತಿಳಿಸಿದರು. ಅಗತ್ಯದ ನೌಕರರಿಲ್ಲವೆಂಬ ಆರೋಪ ಮಾತ್ರವೇ ಕೇಳಿಬರುತ್ತಿದೆ. ಇದಕ್ಕೆ ಪರಿಹಾರ ಕಾಣಲು ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟಕ್ಕೆ ಪಕ್ಷ ನೇತೃತ್ವ ನೀಡಲಿದೆ ಯೆಂದು ಅವರು ತಿಳಿಸಿದರು.
ಅಧ್ಯಕ್ಷ ಬಿ.ಎನ್.ಮುಹಮ್ಮದಲಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಯೂಸುಫ್ ಉಳುವಾರು, ನೇತಾರರಾದ ಎ.ಕೆ. ಆರಿಫ್, ಅಸೀಸ್ ಕಳತ್ತೂರು, ಅಶ್ರಫ್ ಕಾರ್ಳೆ, ಟಿ.ಎಂ. ಶುಹೈಬ್, ಎಂ.ಪಿ. ಖಾಲಿದ್, ಇರ್ಶಾದ್ ಮೊಗ್ರಾಲ್, ಝೆಡ್ ಎ. ಮೊಗ್ರಾಲ್, ಮುಹಮ್ಮದ್ ಕುಂಞಿ ಕೊಯಿ ಪ್ಪಾಡಿ, ಅಬ್ಬಾಸ್ ಕೊಡ್ಯಮ್ಮೆ, ಇಬ್ರಾಹಿಂ ಬತ್ತೇರಿ, ಎ. ಮುಹಮ್ಮದ್ ಕುಂಞಿ ಕುಂಬೋಳ್, ಫಸಲ್ ಪೇರಾಲ್, ತಾಹಿರ ಯೂಸಫ್, ಬಿ.ಎ. ರಹ್ಮಾನ್, ಬಿ.ಎಂ. ಮುಸ್ತಫ, ಸಿದ್ದಿಕ್ ದಂಡೆಗೋಳಿ, ಕೆಎಂ. ಅಬ್ಬಾಸ್, ರೆಡ್ ಮೊಯ್ದು, ಅಬ್ದುರಹ್ಮಾನ್ ಮೊಗ್ರಾಲ್, ಸಬೂರ್ ಎಂ, ನಸೀಮ ಖಾಲಿದ್, ಕೌಲತ್ ಬೀವಿ ಮಾತನಾಡಿದರು.