ಕೆಎಸ್‌ಎಸ್‌ಪಿಎ ಕುಟುಂಬ ಸಂಗಮ

ಕಾಸರಗೋಡು: ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇ ಶನ್ ಕಾಸರಗೋಡು ಮಂಡಲ ಕುಟುಂಬ ಸಂಗಮ ಜರಗಿತು. ಕೆಎಸ್‌ಎಸ್‌ಪಿಎ ಜಿಲ್ಲಾ ಜೊತೆ ಕಾರ್ಯದರ್ಶಿ ಕುಂಞಿಕಣ್ಣನ್ ಕರಿಚ್ಚೇರಿ ಉದ್ಘಾಟಿಸಿದರು. ಕಾಸರಗೋಡು ಮಂಡಲ ಅಧ್ಯಕ್ಷ ಕೆ.ಎಂ. ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ವಿಧಾನಸಭಾ ಮಂಡಲ ಅಧ್ಯಕ್ಷ ಎಂ.ಕೆ. ಚಂದ್ರಶೇಖರನ್ ನಾಯರ್ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ವಿಭಾಗ ಜಿಲ್ಲಾ ಕಾರ್ಯದರ್ಶಿ ವಿ.ವಿ. ಜಯಲಕ್ಷ್ಮೀ, ಜಿಲ್ಲಾ ಸಮಿತಿ ಸದಸ್ಯರಾದ ಉಷಾ ಅರ್ಜುನ್, ಪಿ. ಶಶಿಧರನ್, ಕೆ.ವಿ. ಮುಕುಂದನ್, ಮಧೂರು ಮಂಡಲ ಅಧ್ಯಕ್ಷ ಎಂ. ಕೇಶವ, ಅಬ್ದುಲ್ ಮುನೀರ್, ಪದ್ಮಕುಮಾರ್ ಕೆ.ವಿ., ಸುಶೀಲ ಕೆ.ಸಿ., ಕೆ.ಎನ್. ಮುರಳೀಧರನ್ ಮಾತನಾಡಿದರು. ಸೀತಾರಾಮ ಮಲ್ಲ ಸ್ವಾಗತಿಸಿ, ಎಂ. ರಮಣಿ ವಂದಿಸಿದರು.

You cannot copy contents of this page