ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನ ನಾಳೆಯಿಂದ
ಕಾಸರಗೋಡು: ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಶನ್ (ಕೆ.ಎ.ಎಂ.ಎ) ರಾಜ್ಯ ಸಮ್ಮೇಳನ ೬, ೭ ಮತ್ತು ೮ರಂದು ಕಾಸರಗೋಡು ಪುರಭವನದಲ್ಲಿ ನಡೆಯಲಿದೆ.
ನಾಳೆ ಬೆಳಿಗ್ಗೆ ೯ ಗಂಟೆಗೆ ರಾಜ್ಯಾ ಧ್ಯಕ್ಷ ಎ.ಎ. ಜಾಫರ್ ಧ್ವಜಾರೋಹಣ ನೆರವೇರಿಸುವರು. ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸುವರು. ಸ್ವಾಗತ ಸಂಘದ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್ ಉಪಸ್ಥಿತರಿರುವರು. ಇಬ್ರಾಹಿಂ ಪಳ್ಳಂಗೋಡ್ ಮುಖ್ಯ ಭಾಷಣ ಮಾಡುವರು.
ಮಾಜಿ ಸಚಿವ ಸಿ.ಟಿ. ಅಹಮ್ಮದಲಿ ವಿದ್ಯಾಭ್ಯಾಸ ಸಮ್ಮೇಳನವನ್ನು ಉದ್ಘಾಟಿಸುವರು. ಕೆ.ಎ..ಎಂ.ಎ. ನೀಡುತ್ತಿರುವ ಸಿ.ಎಚ್. ಶಿಹಾಬ್ ತಂಙಳ್ ಮತ್ತು ಎಂ.ಎಸ್. ಮೌಲ್ವಿ ಸ್ಮರಣಾರ್ಥ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು.
ಶಾಸಕ ಎ.ಕೆ.ಎಂ. ಅಶ್ರಫ್ ಸಿ.ಎಚ್ ಹಾಗೂ ಶಿಹಾಬ್ ತಂಙಳ್ ಸಂಸ್ಮರಣೆ ಉಪನ್ಯಾಸ ನಡೆಸುವರು. ಅರಬಿಕ್ ಭಾಷಾ ಸಮ್ಮೇಳನವನ್ನು ಕಾಸರಗೋಡು ಸರಕಾರಿ ಕಾಲೇಜು ಸಹಾಯಕ ಪ್ರಾಧ್ಯಾ ಪಕ ಇ. ಅಬ್ದುನ್ನಾಸರ್ ಉದ್ಘಾಟಿಸು ವರು. ಕೆ.ಎಂ. ಅಬ್ದುಲ್ ಕರೀಂ ವಿಷಯ ಮಂಡಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಹಿಳಾ ಸಮಾವೇಶವನ್ನು ಉದ್ಘಾಟಿಸುವರು. ಸಂಜೆ ಶಿಕ್ಷಕರಿಂದ ಜಾಥಾ ಕಾರ್ಯಕ್ರಮ ನಡೆಯಲಿದೆ. ೭ರಂದು ಪ್ರತಿನಿಧಿ ಸಭೆ, ಸಾಂಸ್ಕೃತಿಕ ಸಭೆ, ಸಂಗೀತ ಕಾರಂಜಿ ಹಾಗೂ ಫೆ. ೮ರ ಗುರುವಾರ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ.