ಕೇರಳ ಮತಗಟ್ಟೆಗೆ: ಮೂರು ಒಕ್ಕೂಟಗಳಲ್ಲಿ ಜಯ ಸಾಧ್ಯತೆ ನಿರೀಕ್ಷೆ
ಕಾಸರಗೋಡು: ಉತ್ಸಾಹ ಹಾಗೂ ಸ್ಪರ್ಧೆ ತುಂಬಿದ ರಾಜಕೀಯ ವಾತಾವರಣದಲ್ಲಿ ಕೇರಳ ಇಂದು ಮತಗಟ್ಟೆಗೆ ಸಾಗಿದೆ. ಎರಡುಮುಕ್ಕಾಲು ಕೋಟಿ ಮತದಾರರಿಗಾಗಿ 25,000ಕ್ಕೂ ಅಧಿಕ ಬೂತ್ಗಳನ್ನು ಸಿದ್ಧಪಡಿಸಲಾಗಿದೆ. ಬೆಳಿಗ್ಗೆ 7ರಿಂದಲೇ ಮತದಾನ ಆರಂಭಗೊAಡಿದ್ದು, ಸಂಜೆ 6 ಗಂಟೆವಗೆರೆ ಮುಂದುವರಿಯಲಿದೆ. ನಕಲಿ ಮತದಾನ ತಡೆಯಲು ವೆಬ್ ಕಾಸ್ಟಿಂಗ್ ಸಹಿತ ವಿವಿಧ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಧಾನ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
40 ದಿನಗಳಿಂದ ನಡೆಯುತ್ತಿದ್ದ ಪ್ರಚಾರಕ್ಕೆ ಅಂತ್ಯ ಹಾಡಿ ಇಂದು ಆವೇಶಪೂರ್ವಕ ಮತದಾನ ನಡೆಯುತ್ತಿದೆ. ಎಲ್ಲಾ ಒಕ್ಕೂಟಗಳೂ ತಮಗೇ ಜಯ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿವೆ. ನಿನ್ನೆ ಪೋಲಿಂಗ್ ಸಾಮಗ್ರಿಗಳ ವಿತರಣೆಯೂ ಪೂರ್ತಿಗೊಂಡಿದ್ದು, ಈ ವೇಳೆ ಯಾವುದೇ ಹೇಳತಕ್ಕ ಸಮಸ್ಯೆ ಉಂಟಾಗಿರಲಿಲ್ಲ. ಎರಡು ಕೋಟಿ 77 ಲಕ್ಷದ 49,159 ಮತದಾರರು ಈ ಬಾರಿ ಮತ ಚಲಾಯಿಸುವರು. ಇವರಲ್ಲಿ 5,34,394 ಮಂದಿ ಪ್ರಥಮವಾಗಿ ಮತ ಚಲಾಯಿಸುವ ಯುವ ಜನಾಂಗವಾಗಿದೆ. ರಾಜ್ಯದಲ್ಲಿ 437 ಮತಗಟ್ಟೆಗಳನ್ನು ಈ ಬಾರಿ ಮಹಿಳೆಯರು ನಿಯಂತ್ರಿಸುವರು. ಕಳೆದ ಬಾರಿ 77.68 ಶೇಕಡಾ ಗರಿಷ್ಠ ಮತದಾನ ದಾಖಲಾಗಿತ್ತು. ಸಹಿಸಲಸಾಧ್ಯವಾದ ಬಿಸಿಯಾಗಿದ್ದರೂ ಈ ಬಾರಿಯೂ ಉತ್ತಮ ಮತದಾನ ನಡೆಯಬಹುದೆಂಬ ನಿರೀಕ್ಷೆ ಹೊಂದಲಾಗಿದೆ.