ಕೇರಳದಲ್ಲಿ ಸಿಪಿಎಂ-ಬಿಜೆಪಿ ಮಧ್ಯೆ ಬಹಿರಂಗ ಹೊಂದಾಣಿಕೆ-ವಿ.ಡಿ. ಸತೀಶನ್

ಕುಂಡಂಕುಳಿ: ಸಂವಿಧಾನ, ಪ್ರಜಾಸತ್ತೆ ಮತ್ತು ಧರ್ಮನಿರಪೇಕ್ಷತೆ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ  ಇತಿಶ್ರೀಗೊಳಿಸುತ್ತಿ ದೆಯೆಂದೂ ಅದಕ್ಕೆ ಕೇರಳದ ಸಿಪಿಎಂ ಬಿಜೆಪಿಯೊಂದಿಗೆ ಗುಪ್ತವಾಗಿ ಅಲ್ಲ ಬದಲಾಗಿ ಈಗ ಬಹಿರಂಗವಾಗಿಯೇ ಹೊಂದಾಣಿಕೆ ಮಾಡಿಕೊಂಡಿದೆಯೆಂದು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಹೇಳಿದ್ದಾರೆ.ಕುಂಡಂಕುಳಿಯಲ್ಲಿ ನಿನ್ನೆ ಯುಡಿಎಫ್ ಉಮೇದ್ವಾರ ರಾಜ್‌ಮೋಹನ್ ಉಣ್ಣಿತ್ತಾನ್‌ರ ಪರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಸತೀಶನ್ ಮಾತನಾಡುತ್ತಿದ್ದಾರೆ.ಮುಖ್ಯಮಂತ್ರಿಯ  ಮಗಳ ಮಾಲಕತ್ವದಲ್ಲಿರುವ   ಸಂಸ್ಥೆಗೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಪ್ರಕರಣದ ತನಿಖೆಯನ್ನು ತಣ್ಣದಾಗಿಸಲಾಗುತ್ತಿದ್ದು, ಇದು ಬಿಜೆಪಿ ಮತ್ತು ಸಿಪಿಎಂ ನಡುವಿನ ಹೊಂದಾಣಿಕೆಗೆ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಉದುಮ ವಿಧಾನಸಭಾ ಕ್ಷೇತ್ರದ  ಯುಡಿಎಫ್ ಚುನಾವಣಾ ಸಮಿತಿಯ ಅಧ್ಯಕ್ಷ ಕಲ್ಪೆಟ್ಟ ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್, ಎ. ಗೋವಿಂದನ್ ನಾಯರ್ ಬಾಲಕೃಷ್ಣನ್ ಪೆರಿಯ, ಹಕ್ಕೀಂ ಕುನ್ನಿಲ್, ಬಿ.ಪಿ. ಪ್ರದೀಪ್ ಕಮಾರ್, ಎಂ.ಸಿ. ಪ್ರಭಾಕರನ್, ಗೀತಾಕಷ್ಣನ್, ಕೆ.ಬಿ. ಮೊಹಮ್ಮದ್ ಕುಂಞಿ, ಮಿನಿ ಚಂದ್ರನ್ ಮೊದಲಾದವರು ಮಾತನಾಡಿದರು.

You cannot copy contents of this page