ಕೊಲ್ಲಂಬಂಜಾರ ಹಿಂದೂ ರುದ್ರಭೂಮಿ ಶೆಡ್ ನಿರ್ಮಾಣ ಪೂರ್ತಿ: ಇನ್ನಷ್ಟು ಅಭಿವೃದ್ಧಿಗೆ ಸ್ಥಳೀಯರ ಆಗ್ರಹ
ಪೈವಳಿಕೆ: ಪಂಚಾಯತ್ನ ೧೪ನೇ ವಾರ್ಡ್ ಕುಡಾಲು ಮೇರ್ಕಳ ಬಳಿಯ ಕೊಲ್ಲಂಬಂಜಾರ ಸಾರ್ವಜನಿಕ ರುದ್ರಭೂಮಿಯ ಶೆಡ್ಡ್ ನಿರ್ಮಾಣ ಪೂರ್ತಿಗೊಂಡಿದ್ದು, ಸ್ಥಳೀಯರ ಹಲವು ಕಾಲದ ಬೇಡಿಕೆ ಈಡೇರಿದೆ. ಈ ಹಿಂದೆ ಈ ಸ್ಮಶಾನಕ್ಕೆ ಆವರಣ ಗೋಡೆ ಮಾತ್ರವೇ ನಿರ್ಮಿಸಲಾಗಿತ್ತು. ಆ ಬಳಿಕ ಸ್ಮಶಾನದ ದುರಸ್ತಿ ಹಾಗೂ ಸಂಪೂರ್ಣ ಸೌಕರ್ಯ ಏರ್ಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ದಶಂಬರ್ ತಿಂಗಳಿಂದ ಪಂ. ಸದಸ್ಯೆ ರಾಜೀವಿ ಶೆಟ್ಟಿಗಾರ್ರ ಮುತುವರ್ಜಿಯಿಂದ ಪಂ.ನಿಂದ ಶೆಡ್ಡ್ ನಿರ್ಮಾಣಕ್ಕೆ ಮೊತ್ತ ಮಂಜೂರು ಮಾಡಲಾಗಿತ್ತು. ಈಗ ಶೆಡ್ಡ್ನ ಕೆಲಸ ಪೂರ್ತಿಗೊಂಡಿದೆ. ಆದರೆ ಸ್ಮಶಾನವು ಎತ್ತರದ ಪ್ರದೇಶದಲ್ಲಿದ್ದು, ಅಲ್ಲಿಗೆ ತೆರಳಲು ಸೂಕ್ತ ಮಾರ್ಗದ ವ್ಯವಸ್ಥೆ ಇಲ್ಲದ ಕಾರಣ ಮೃತದೇಹಗಳನ್ನು ಅಲ್ಲಿಗೆ ತಲುಪಿಸಲು ಕಷ್ಟವಾಗುತ್ತಿದೆ. ನೀರು, ವಿದ್ಯುತ್ ಸೌಕರ್ಯ ಕೂಡಾ ಇಲ್ಲಿ ಇಲ್ಲ. ಕುಡಾಲು ಮೇರ್ಕಳ, ಕಯ್ಯಾರು ಗ್ರಾಮ ಸಹಿತ ವಿವಿಧ ಪ್ರದೇಶದ ನಿವಾಸಿಗಳು ಈ ರುದ್ರಭೂಮಿಯಲ್ಲಿ ಮೃತ ದೇಹಗಳನ್ನು ಸುಡುತ್ತಿದ್ದು, ಇನ್ನಷ್ಟು ಅಭಿವೃದ್ಧಿ ಇಲ್ಲಿ ನಡೆಸಬೇಕು. ಶೆಡ್ಡ್ ಶೀಘ್ರ ಉದ್ಘಾಟಿ ಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.