ಗಾಳಿ: ವಿವಿಧೆಡೆ ಮರ ಮುರಿದುಬಿದ್ದು ವ್ಯಾಪಕ ಹಾನಿ

ಕಾಸರಗೋಡು: ನಿನ್ನೆ ರಾತ್ರಿ ಬೀಸಿದ ಭಾರೀ ಗಾಳಿಗೆ ವಿವಿಧೆಡೆ ಮರಗಳು ಮುರಿದುಬಿದ್ದು ಹಾನಿ ಸಂಭವಿಸಿದೆ. ವಿದ್ಯಾನಗರದಲ್ಲಿ ಕಲೆಕ್ಟರೇಟ್‌ನ ಆವರಣ ಗೋಡೆ  ಸಮೀಪದಲ್ಲಿದ್ದ ಮರ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ಕಂಬ ಕೂಡಾ ಮುರಿದು ರಸ್ತೆಗೆ ಅಡ್ಡವಾಗಿ  ಬಿದ್ದಿದ್ದು, ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಕಾಸರಗೋಡಿನಲ್ಲಿ ಜೆ.ಪಿ ಕಾಲನಿಯಲ್ಲಿ ತೆಂಗಿನ ಮರವೊಂದು ಮುರಿದು ಬಿದ್ದಿದೆ.  ಅದೇ ರೀತಿ ಚೆರ್ಕಳ ಕೆಎಸ್‌ಇಬಿ ಕಚೇರಿ ವ್ಯಾಪ್ತಿಯ ಇರಿಯಣ್ಣಿ ಸಹಿತ ವಿವಿಧೆಡೆ ಮರಗಳು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದು ಹಾನಿ ಸಂಭವಿಸಿರುವುದು ವರದಿಯಾಗಿದೆ.

RELATED NEWS

You cannot copy contents of this page