ಗುತ್ತಿಗೆ ನೀಡಿದ ರಸ್ತೆ ಬದಲಿಸಿ ಕಾಂಕ್ರೀಟ್ ನಡೆಸಲೆತ್ನ ಮೊಟಕುಗೊಂಡ ಕಾಮಗಾರಿಗೆ ಮರು ಜೀವ

ಕುಂಬಳೆ: ಕುಂಬಳೆ ಪಂಚಾಯತ್ ೧೨ನೇ ವಾರ್ಡ್‌ನ ಶೇಡಿಮೂಲೆಯಲ್ಲಿ ಶಾಸಕರ ಫಂಡ್‌ನಿಂದ ೧೦ ಲಕ್ಷ ರೂಪಾಯಿ ವ್ಯಯಿಸಿ ೨೦೦ ಮೀಟರ್ ರಸ್ತೆಗೆ ಕಾಂಕ್ರೀಟ್ ನಡೆಸಲು ಮಂಜೂರು ಮಾಡಿದ ಯೋಜನೆಯಲ್ಲಿ ಖಾಸಗಿ ಹಿತ್ತಿಲಿನ ಮಧ್ಯದಲ್ಲಾಗಿ  ಕೆಲಸ ಆರಂಭಿಸಿದಾಗ ಬ್ಲೋಕ್ ಪಂಚಾಯತ್  ಅದಕ್ಕೆ ತಡೆಯೊಡ್ಡಿದೆ. ಇತ್ಯರ್ಥ ಮೂಲಕ ಬೇರೆಡೆ ನಿರ್ಮಿಸಿದ ರಸ್ತೆಯನ್ನು ಪಂಚಾಯತ್‌ನ ಸೊತ್ತು ಅಭಿವೃದ್ಧಿ ಫಂಡ್‌ಗೆ ಬಿಟ್ಟುಕೊಡಲು ಸ್ಥಳದ ಮೂಲಕ ಒಪ್ಪಿಕೊಂಡಿದ್ದಾರೆ. ಇದರಿಂದ ಆ ಮೂಲಕವೇ ರಸ್ತೆ ನಿರ್ಮಿಸಿ ಡಾಮರೀಕರಣ ನಡೆಸಲು ಅಧಿಕೃತ ಮಟ್ಟದಲ್ಲಿ ಕ್ರಮ ಆರಂಭಿಸಲಾಗಿದೆ.

ಎಂಟು ತಿಂಗಳ ಹಿಂದೆ ಖಾಸಗಿ ಹಿತ್ತಿಲಿನ ಒಂದು ಭಾಗದಲ್ಲಾಗಿ ರಸ್ತೆಗೆ ಡಾಮರೀಕರಣ ನಡೆಸಲಿರುವ ಯೋಜನೆಗೆ ರೂಪುರೇಖೆ ಅಂಗೀಕರಿಸಲಾಗಿದೆಯೆಂದು ಹೇಳಲಾಗುತ್ತಿದೆ. ಹೆಚ್ಚು ವಿಳಂಬವಾಗದೆ ಅದಕ್ಕೆ ಗುತ್ತಿಗೆಯನ್ನು ನೀಡಲಾಯಿತು. ಗುತ್ತಿಗೆದಾರ ಹಳೆಯ ರಸ್ತೆಯಲ್ಲಿ ಕೆಲಸ  ಆರಂಭಿಸಿ ಕೆಲವು ಮೀಟರ್ ಮುಂದುವರಿದಾಗ ಖಾಸಗಿ ಸ್ಥಳದ ಮಧ್ಯದಲ್ಲಾಗಿ ರಸ್ತೆ ಹಾದು ಹೋಗಿರುವುದಾಗಿ ಹೇಳಲಾಗುತ್ತಿದೆ.

ಈ ವಿಷಯ ತಿಳಿದ ನಾಗರಿಕರು ಬ್ಲೋಕ್ ಪಂಚಾಯತ್‌ಗೆ ದೂರು ನೀಡಿದ್ದು, ಬ್ಲೋಕ್ ಇಂಜಿನಿಯರ್ ಸ್ಥಳಕ್ಕೆ ತಲುಪಿ ಕೆಲಸ ಸ್ಥಗಿತಗೊಳಿಸಿ ಸ್ಥಳವನ್ನು ಬಿಟ್ಟುಕೊಟ್ಟರು. ಇದರಿಂದ ಎಂಟು ತಿಂಗಳಿಂದ ವಾಹನ ಸಂಚಾರಕ್ಕೆ ಹಾಗೂ ನಡೆದು ಹೋಗಲು ಸಾಧ್ಯವಾಗದೆ ಪ್ರಯಾಣಿಕರು ಸಮಸ್ಯೆಗೀಡಾಗಿದ್ದಾರೆ.

ಈ ಮಧ್ಯೆ ಪಂಚಾಯತ್ ಇಂಜಿನಿಯರ್‌ರ ನಿರ್ದೇಶದಂತೆ ಸ್ಥಳದ ಮೂಲಕ ತನ್ನ ಹಿತ್ತಿಲ ಮೂಲಕ ರಸ್ತೆ ಹಾದು ಹೋಗುವ ಸ್ಥಳವನ್ನು ಪಂಚಾಯತ್‌ನ ಸೊತ್ತು ಅಭಿವೃದ್ಧಿ ಪಂಡ್‌ಗೆ ಹಸ್ತಾಂತರಿಸಿರುವುದಾಗಿ ಹೇಳಲಾಗುತ್ತಿದೆ. ಸ್ಥಳ ಪಂಚಾಯತ್‌ನದ್ದಾದರೆ ಆ ಮೂಲಕ ರಸ್ತೆ ನಿರ್ಮಿಸುವುದರಲ್ಲಿ ಸಮಸ್ಯೆ ಇಲ್ಲ ಎಂದು  ಇಂಜಿನಿಯರ್ ತಿಳಿಸಿದ್ದಾರೆ. ಯಾವ ಸ್ಥಳದಲ್ಲಾದರೂ ರಸ್ತೆಯಾದರೆ ಸಾಕೆಂಬ ನಾಗರಿಕರ ನಿಲುವು ಸಾರ್ಥಕಗೊಳ್ಳುವುದೆಂಬ ನಿರೀಕ್ಷೆ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page