ಗೃಹಿಣಿ ಹೃದಯಾಘಾತದಿಂದ ನಿಧನ

ಬದಿಯಡ್ಕ: ಬದಿಯಡ್ಕ ಗುರುಗಣೇಶ್ ನಿಲಯದ ನಿವಾಸಿಯೂ, ಬದಿಯಡ್ಕದಲ್ಲಿ  ವ್ಯಾಪಾರಿಯಾಗಿದ್ದ ದಿ| ಸುಂದರ ಪ್ರಭು ಅವರ ಪತ್ನಿ ಪೂರ್ಣಿಮ ಪ್ರಭು  (73) ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಮಕ್ಕಳಾದ ಗುರುಪ್ರಸಾದ್ (ಬದಿಯಡ್ಕದಲ್ಲಿ ವ್ಯಾಪಾರಿ), ಗಣೇಶ್ ಪ್ರಸಾದ್ (ಪುತ್ತೂರಿನಲ್ಲಿ ವ್ಯಾಪಾರಿ), ರೂಪಾ ಕಾಮತ್, ಅಳಿಯ ಪ್ರಶಾಂತ್ ಕಾಮತ್ ಬೆಂಗಳೂರು, ಸೊಸೆಯಂದಿರಾದ ಸೀಮಾ, ಪೂಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page