ಚಕ್ರವರ್ತಿ ಕ್ಲಬ್ ಕಟ್ಟಡಕ್ಕೆ ಧರ್ಮಸ್ಥಳದಿಂದ ಅನುದಾನ
ಮಂಜೇಶ್ವರ: ಹೊಸಂಗಡಿ ಚಕ್ರವರ್ತಿ ಕ್ಲಬ್ನ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಕ್ಷೇತ್ರಕ್ಕೆ ಅನುದಾನದ ಮನವಿಯನ್ನು ಸಲ್ಲಿಸಿದ್ದು, ಮನವಿಗೆ ಕ್ಷೇತ್ರದ ಸಮುದಾಯ ಅಭಿವೃದ್ಧಿ ಯಿಂದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಕ್ಲಬ್ನ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿಯ ಅನುದಾನವನ್ನು ಮಂಜೂರು ಮಾಡಿದ್ದಾರೆ. ಅನುದಾನದ ಡಿಡಿ ಕಾಸರಗೋಡು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರು, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶಶಿಕಲಾ ಸುವರ್ಣ, ನಿಕಟಪೂರ್ವ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್ಭಾಗ್ ಜನಜಾಗೃತಿ ವೇದಿಕೆಯ ಸದಸ್ಯ ಹರೀಶ್ ಶೆಟ್ಟಿ ಮಾಡ ಸೇರಿ ಮಂಜೂರಾತಿ ಪತ್ರವನ್ನು ಚಕ್ರವರ್ತಿ ಕ್ಲಬ್ನ ಅಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಸುರೇಶ್, ಕೋಶಾಧಿಕಾರಿ ಅಶೋಕ್, ಸಾಯಿ ಕಿರಣ್ ಮತ್ತು ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ನೀಡಿದರು. ಹಲವು ಗಣ್ಯರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಭಾಸ್ಕರ್ ನಿರೂಪಿಸಿದರು.