ಚೆಂಗಳ ಕುಟುಂಬಾರೋಗ್ಯ ಕೇಂದ್ರ ಕಟ್ಟಡ  ಸಹಿತ ೮ ಆಸ್ಪತ್ರೆ ಕಟ್ಟಡ ಉದ್ಘಾಟನೆ

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಸೇರಿಸಿ ಜಿಲ್ಲೆಯ ಎಂಟು ಆರೋಗ್ಯ ಸಂಸ್ಥೆಗಳಲ್ಲಿ ನಿರ್ಮಿ ಸಿದ ಆಧುನಿಕ ಸೌಕರ್ಯಗಳೊಂದಿಗಿನ ಹೊಸ ಕಟ್ಟಡಗಳನ್ನು ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಚೆಂಗಳ ೧.೭೦ ಕೋಟಿ ರೂ., ಅಂಗಡಿಮೊಗರು ೮೫ ಲಕ್ಷ ರೂ, ವಾಣಿನಗರ ೮೨.೫೦ ಲಕ್ಷ ರೂ. ಸಹಿತ ಇತರ ೫ ಆರೋಗ್ಯ ಕೇಂದ್ರಗಳಿಗೂ ಸೇರಿ ೧೧ ಕೋಟಿ ರೂ.ಗಳ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಹಣ ವೆಚ್ಚವಾಗಿದೆ. ವಾಣಿನಗರ, ಚೆಂಗಳ ಅಂಗಡಿಮೊಗರು ಎಂಬೀ ಆರೋಗ್ಯ ಕೇಂದ್ರಗಳನ್ನು ಆರ್ದ್ರಂ ಗುಣಮಟ್ಟಕ್ಕೇ ರಿಸಲಿರುವ ಕ್ರಮಗಳು ಪ್ರಗತಿಯಲ್ಲಿದೆ. ಇದರಂಗವಾಗಿ ಹೊಸ ಕಟ್ಟಡ ಸಮುಚ್ಚಯ ಸಿದ್ಧಪಡಿಸಲಾಗಿದೆ.

ಜಿಲ್ಲೆಯನ್ನು ಆರೋಗ್ಯ ವಲ ಯದಲ್ಲಿ ಸ್ವಾವಲಂಭನೆಗೊಳಿಸುವುದು ಸರಕಾರದ ಉದ್ದೇಶವಾಗಿದ್ದು, ಅದಕ್ಕಾಗಿ ಆರೋಗ್ಯ ವಲಯದಲ್ಲಿ ಬೃಹತ್ ಯೋಜನೆಗಳನ್ನು ಸರಕಾರ ಆವಿಷ್ಕರಿಸಿದೆ ಎಂದು ವೀಣಾ ಜೋರ್ಜ್ ನುಡಿದರು.  ಚೆಂಗಳ ಕುಟುಂಬಾರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾ ಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಆರೋಗ್ಯ ವಲಯದಲ್ಲಿ ಜಿಲ್ಲೆಯಲ್ಲಿ ೩೪ ಯೋಜನೆಗಳನ್ನು ಪೂರ್ತಿಗೊಳಿಸಲಾಗಿದೆ ಎಂದು ಅವರು ನುಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಚೆಂಗಳ ಪಂ. ಅಧ್ಯಕ್ಷ ಖಾದರ್ ಬದ್ರಿಯ ಕಾನ್ಫರೆನ್ಸ್ ಸಭಾಂಗಣ ಉದ್ಘಾಟಿಸಿದರು. ಉಪಾಧ್ಯಕ್ಷೆ ಸಫಿಯ ಹಾಶಿಂ, ಡಾ| ಜಮಾಲ್ ಅಹಮ್ಮದ್ ಸಹಿತ ಹಲವರು ಭಾಗವಹಿಸಿದರು. ವಾಣೀನಗರ ಸಹಿತ ೮ ಕಟ್ಟಡಗಳನ್ನು ಸಚಿವೆ ಉದ್ಘಾಟಿಸಿದರು.

Leave a Reply

Your email address will not be published. Required fields are marked *

You cannot copy content of this page