ಜಯರಾಮ ಸುವರ್ಣ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಬದಿಯಡ್ಕ: ಯಕ್ಷಗುರು ಜಯ ರಾಮ ಪಾಟಾಳಿ ಪಡುಮಲೆ ಇವರ ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಕಾರ್ಯಾಲಯ ಬದಿಯಡ್ಕ ಮೇಲಿನ ಪೇಟೆಯಲ್ಲಿ ಉದ್ಘಾಟನೆಗೊಂಡಿತು. ಹಿರಿಯ ಸಮಾಜ ಸೇವಕ ಜಯದೇವ ಖಂಡಿಗೆ ನೀರ್ಚಾಲು ದೀಪ ಬೆಳಗಿಸಿ ಉದ್ಘಾಟಿಸಿ ದರು. ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟಕುಂಜೆ ಅಧ್ಯಕ್ಷತೆ ವಹಿಸಿದರು. ಡಾ. ರವೀಶ್ ಪಡುಮಲೆ ಮುಖ್ಯ ಅತಿಥಿ ಯಾಗಿದ್ದರು. ಅಖಿಲೇಶ್ ನಗುಮುಗಂ, ಪ್ರೊ. ಶ್ರೀನಾಥ್, ಶಂಕರ ಬೆಳ್ಳಿಗೆ, ರಘು ಕಲ್ಚಾರ್, ಮುಕುಂದ, ಅಶ್ವಿತ್ ಸರಳಾಯ, ಹರೀಶ್ ಗೋಸಾಡ, ಗೋಪಾಲಕೃಷ್ಣ ವಾಂತಿಚ್ಚಾಲ್, ಮನೋಹರ ಬಲ್ಲಾಳ್, ಮುಖೇಶ್ ಹಾಗೂ ಹಲವರು ಉಪಸ್ಥಿತರಿದ್ದರು.