ಜುಗಾರಿ ಕೇಂದ್ರದಿಂದ 14 ಮಂದಿ ಸೆರೆ

ಕಾಸರಗೋಡು: ಪಳ್ಳಿಕ್ಕರೆಯ ಬೇಕಲ್‌ಫೋರ್ಟ್ ರೆಸೋರ್ಟ್‌ನ  ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ 14 ಮಂದಿಯನ್ನು ಬಂಧಿಸಿ ದ್ದಾರೆ. ಇವರ ಕೈಯಿಂದ 2,52,170 ರೂಪಾಯಿಗಳನ್ನು ವಶಪಡಿಸಲಾಗಿದೆ. ಇಂದು ಮುಂಜಾನೆ 2.30ರ ವೇಳೆ ಬೇಕಲ ಎಸ್‌ಐ ಸಂತೋಷ್‌ರ ನೇತೃತ್ವ ದಲ್ಲಿ ಪೊಲೀಸರು ರೆಸೋರ್ಟ್‌ಗೆ ದಾಳಿ ನಡೆಸಿದ್ದಾರೆ. ಪಳ್ಳಿಕ್ಕೆರೆ ಪೂಚಕ್ಕಾಡ್ ರಹಮ್ಮತ್ ಹೌಸ್‌ನ ಕೆ.ಎಂ. ಅಬೂಬಕ್ಕರ್ (49), ಪಾಣತ್ತೂರು ಪನತ್ತಡಿಯ ಅರೇರತ್ ಎ. ನೌಫಲ್ (33), ಕಾಞಂಗಾಡ್ ಅದಿಞಾಲ್ ಟಿ.ಪಿ. ಮಂಜಿಲ್‌ನ ಅಶ್ರಫ್ ತಾಯಲ್ (52), ರಾಜ ಪುರಂ ಕಳ್ಳಾರ್ ತುರಕ್ಕೊಳದ ಜೋಶಿ ಮ್ಯಾಥ್ಯು (43), ಕಾಞಂಗಾಡ್ ಮುರಿಯನಾವಿಯ ಕೆ. ಜಾಸಿರ್ (24), ಮಾಲೋಮ್ ಚಿರಮ್ಮಲ್‌ನ ಮುಹಮ್ಮದ್ ರಾಶಿದ್ (34), ಅದಿಞಾಲ್‌ನ ಹಸನ್ ಅಬು (68), ತೃಕ್ಕರಿಪುರ ಆಯಿಟ್ಟಿಯ ಜಾಫರ್ ಖಾನ್ (32), ಪೂಙಚ್ಚಾಲ್ ಚಮ್ಮಂ ಜೇರಿಯ ಸಿ.ಆರ್. ವಿಜಯನ್ (45), ಕಲ್ಲಿಕೋಟೆ ಒಳವಣ್ಣ ಪಾಲ ಕ್ಕೋಡ್ ತಾಳತ್ತ್‌ನ ಎಂ.ಕೆ. ಸಿದ್ದಿಕ್ (52), ಬೀಮನಡಿ ತೆಕ್ಕೆಕುನ್ನಿಲ್‌ನ ಕುರ್ಯಕೋಸ್ (50), ವೆಳ್ಳರಿಕುಂ ಡ್ ಕಯ್ಯಿಲ್‌ನ ಎ. ಮುರಳೀಧರನ್ (52), ಮಂಗಳೂರು ಪೊನ್ನು ನಿವಾಸ್‌ನ ಮೇಘರಾಜ್ (32) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.

RELATED NEWS

You cannot copy contents of this page