ಜೇನು ಕೃಷಿ ತರಬೇತಿ: ಆಸಕ್ತರಿಗೆ ನೋಂದಾವಣೆಗೆ ಕರೆ


ಮುಳ್ಳೇರಿಯ: ಕಾರಡ್ಕ ಬ್ಲೋಕ್ ಪಂಚಾಯತ್ನ ಅಧೀನದಲ್ಲಿರುವ ಕೃಷಿಭವನಗಳ ಕೃಷಿಕರಿಗೆ ಹಾರ್ಟಿಕೋರ್ಪ್ ಮೂಲಕ ಈ ತಿಂಗಳ 25ರಿಂದ 27ರ ತನಕ ಜೇನು ಸಾಕಣೆ ಕೃಷಿಯಲ್ಲಿ ತರಬೇತಿ ನೀಡಲಾಗುವುದು. ಜೇನು ಕೃಷಿಯಲ್ಲಿ ಆಸಕ್ತಿ ಇರುವ ಕಾರಡ್ಕ ಪಂಚಾಯತ್ ವ್ಯಾಪ್ತಿಯ ಪ್ರಥಮವಾಗಿ ನೋಂದಾಯಿಸುವ 20 ಮಂದಿ ಕೃಷಿಕರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದೆ.
ತರಬೇತಿಯಲ್ಲಿ ಭಾಗವ ಹಿಸುವ ಕೃಷಿಕರಿಗೆ ವಿವಿಧ ಉಪಕರಣಗಳನ್ನು 40 ಶೇಕಡಾ ಸಬ್ಸಿಡಿಯಲ್ಲಿ ಹಾರ್ಟಿಕೋರ್ಪ್ ಲಭ್ಯ ಗೊಳಿಸಲಿದೆ. ಆಸಕ್ತಿ ಇರುವವರು 9383472273 ಎಂಬ ನಂಬ್ರವನ್ನು ಸಂಪರ್ಕಿಸಿ ಹೆಸರು, ಮಾಹಿತಿಯನ್ನು ನೀಡಬೇಕೆಂದು ಕಾರಡ್ಕ ಕೃಷಿ ಅಧಿಕಾರಿ ತಿಳಿಸಿದ್ದಾರೆ.

You cannot copy contents of this page