ಜ್ವರ ಬಾಧಿಸಿ ಗಲ್ಫ್ ಉದ್ಯೋಗಿ ಮೃತ್ಯು

ಕಾಸರಗೋಡು: ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಗಲ್ಫ್‌ನಿಂದ ಊರಿಗೆ ಮರಳಿ ಬಂದ ವ್ಯಕ್ತಿ ಮೃತಪಟ್ಟರು. ನಾಲ್ಕನೇ ಮೈಲು ನಿವಾಸಿಯೂ, ಪಚ್ಚಕ್ಕಾಡ್‌ನಲ್ಲಿ ವಾಸಿಸುವ ಮೊಹಮ್ಮದ್ ಶರೀಫ್ ಕೆ (57) ಮೃತಪಟ್ಟ ವ್ಯಕ್ತಿ. ಇವರು ಹಲವು ವರ್ಷಗಳಿಂದ ದುಬಾಯಲ್ಲಿದ್ದರು. ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಊರಿಗೆ ಮರಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ನಿಧನ ಸಂಭವಿಸಿದೆ.

ನಾಲ್ಕನೇ ಮೈಲಿನ ದಿ| ಮೊಯ್ದೀನ್ ಕುಂಞಿ-ಬೀಫಾತ್ತಿಮ ದಂಪತಿಯ ಪುತ್ರನಾದ ಮೃತರು ಪತ್ನಿ ಸೈರ, ಮಕ್ಕಳಾದ ಶಹೀನ್ ಶಯಾಫ್ (ಖತ್ತರ್), ಸನಾ ಫಾತಿಮ, ಅಳಿಯ ಫಯಾಸ್ ಬಾಂಗೋಡ್ (ಶಾರ್ಜಾ), ಸಹೋದರ-ಸಹೋದರಿಯರಾದ ಸಫಿಯ ಯಹೃದ್ ಬುಖಾರಿ ತಂಙಳ್ ಮಡವೂರ್‌ಕೋಟ,  ಲತೀಫ್, ಅಬ್ದುಲ್ ಖಾದರ್ (ಖತ್ತರ್ ಕೆಎಂಸಿಸಿ ಚೆಂಗಳ ಪಂಚಾಯತ್ ಉಪಾಧ್ಯಕ್ಷ), ಹಾರಿಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page