ಯುವಕ ನಾಪತ್ತೆ

ಉಪ್ಪಳ: ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಅಂಚಿಕಟ್ಟೆ  ಅಶ್ರಫ್ ಮಂಜಿಲ್‌ನ ಹಮೀದ್ ಹಾಜಿಯವರ ಪುತ್ರ ಅಬ್ದುಲ್ ರಹಿಮಾನ್ ಯು.ಎಚ್ (48) ನಾಪತ್ತೆಯಾದ ಯುವಕ. ಜುಲೈ ೨೫ರಂದು ಬೆಳಿಗ್ಗೆ 10 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದು, ಅನಂತರ ಮರಳಿ ಬಂದಿಲ್ಲ ಎನ್ನಲಾಗಿದೆ. ವಿವಿಧೆಡೆ ಹುಡುಕಿದರೂ ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಸಹೋದರ ಮೊಹಮ್ಮದ್ ಬಶೀರ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page