ಟಯರ್ ಅಂಗಡಿ ಮಾಲಕನಿಗೆ ಹಲ್ಲೆ: 3 ಮಂದಿ ವಿರುದ್ಧ ಕೇಸು

ಉಪ್ಪಳ: ಮಣ್ಣಂಗುಳಿ ನಿವಾಸಿಯೂ ಮಣ್ಣಂಗುಳಿಯಲ್ಲಿ ಟಯರ್ ಅಂಗಡಿ ಮಾಲಕನಾದ ಅಬ್ದುಲ್ ಮಜೀದ್ (63)ರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರುಕ್ಸಾದ್, ನಾಸಿರ್, ಮೂಸ ಎಂಬಿವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್‌ನ ಟಯರ್‌ಗೆ ಗಾಳಿ ತುಂಬಿಸುವ ವಿಷಯಕ್ಕೆ  ಸಂಬಂಧಿಸಿ  ಅಬ್ದುಲ್ ಮಜೀದ್ ಹಾಗೂ ಮಣ್ಣಂಗುಳಿಯ ಮೂಸ ಎಂಬಿವರ ಮಧ್ಯೆ ವಾಗ್ವಾದ ಉಂಟಾಗಿತ್ತೆನ್ನಲಾಗಿದೆ. ಇದರ ಮುಂದುವರಿಕೆಯಾಗಿ ಮೊನ್ನೆ ರುಕ್ಸಾದ್, ನಾಸಿರ್, ಮೂಸ ಎಂಬಿವರು ಸೇರಿ ಅಬ್ದುಲ್ ಮಜೀದ್‌ಗೆ ಹಲ್ಲೆಗೈದಿರುವುದಾಗಿ  ದೂರಲಾಗಿದೆ. ಇದೇ ವೇಳೆ ಹೊಡೆದಾಟದಲ್ಲಿ ಅಬ್ದುಲ್ ಮಜೀದ್ ಹಾಗೂ ಮೂಸ ಗಾಯಗೊಂಡಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

RELATED NEWS

You cannot copy contents of this page