ಟಿ.ವಿ. ವೀಕ್ಷಿಸುತ್ತಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

ಬದಿಯಡ್ಕ: ಟಿ.ವಿ. ವೀಕ್ಷಿ ಸುತ್ತಿದ್ದಾಗ ಮಹಿಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಕುಂಟಾಲುಮೂಲೆ ನಿವಾಸಿ ತಿಮ್ಮಪ್ಪ ಪಾಟಾಳಿ ಯವರ ಪತ್ನಿ ಸಾವಿತ್ರಿ (51) ಮೃತಪಟ್ಟ ಮಹಿಳೆ. ನಿನ್ನೆ ರಾತ್ರಿ ೯.೩೦ರ ವೇಳೆ ಮನೆಯಲ್ಲಿ ಟಿ.ವಿ. ವೀಕ್ಷಿಸುತ್ತಿದ್ದಾಗ ತೀವ್ರ ಅಸ್ವಸ್ಥತೆಗೊಂಡು ಸಾವಿತ್ರಿ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಅವರನ್ನು ಬದಿಯಡ್ಕದ ಆಸ್ಪತ್ರೆಗೂ, ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತಿ ಮಕ್ಕಳಾದ ಮುರಳೀಕೃಷ್ಣ, ಚೈತ್ರ, ಅಮೃತ, ಅಳಿಯಂದಿರಾದ ಸುನಿಲ್, ಅನಿಲ್, ಸಹೋದರಿಯರಾದ ಲೀಲ, ಸಂಜೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page