ಡಯಾಲಿಸಿಸ್ ಸೆಂಟರ್‌ನಿಂದ ಮಲಿನ ಜಲ ಬಾವಿಗೆ: ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ
ಮುಟ್ಟತ್ತೋಡಿ: ಇಲ್ಲಿನ ಬಾರಿ ಕ್ಕಾಡ್ ಡಯಾಲಿಸಿಸ್ ಸೆಂಟರ್‌ನ ಮಲಿನ ಜಲವನ್ನು ಸಮೀಪದ ಬಾವಿ ಗಳಿಗೆ, ಶುದ್ಧ ಜಲ ಮೂಲಗಳಿಗೆ ಹರಿಯ ಬಿಟ್ಟು ಶುದ್ಧಜಲ ಮಲಿನಗೊಳಿಸುತ್ತಿರು ವುದಾಗಿ ಸಮೀಪ ವಾಸಿಗಳು ನೀಡಿದ ದೂರಿನಂತೆ ದುರಂತ ನಿವಾ ರಣೆ ಕಾನೂನು ಪ್ರಕಾರ ಕ್ರಮ ಸ್ವೀಕರಿಸಲು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಆದೇಶಿ ಸಿದ್ದಾರೆ. ಇಲ್ಲಿನ ಡಯಾಲಿಸಿಸ್ ಸೆಂಟರ್‌ನ ರೋಗಿಗಳನ್ನು ಹಂತಹಂತ ವಾಗಿ ಸರಕಾರಿ ಆಸ್ಪತ್ರೆಗಳಿಗೂ, ಉಚಿತವಾಗಿ ಡಯಾಲಿಸಿಸ್ ನಡೆಸಲು ಸಿದ್ಧರಿರುವ ಇತರ ಖಾಸಗಿ ಆಸ್ಪತ್ರೆಗಳಿಗೂ ಬದಲಿಸಲು ತೀರ್ಮಾ ನಿಸಲಾಗಿದೆ. ಅದುವರೆಗೆ ಡಯಾಲಿಸಿಸ್ ಸೆಂಟರ್ ಸರಕಾರದ ನಿರ್ದೇಶಗಳಿಗನುಸಾರ ಕಾರ್ಯಾಚರಿಸುತ್ತಿದೆ ಎಂದು ಕಚಿತಪಡಿಸಲು ರೋಗಿಗಳ ಚಿಕಿತ್ಸೆ ಮೊಟ ಕಾಗದಂತೆ ಆರೋಗ್ಯ ಸಮಸ್ಯೆಗಳನ್ನು ಪರಿಹರಿ ಸಲು ಕ್ರಮ ಸ್ವೀಕರಿಸಲು ಜಿಲ್ಲಾ ವೈದ್ಯಾಧಿ ಕಾರಿಗೆ ಹೊಣೆ ನೀಡಲಾಗಿದೆ. ಮಲಿನೀಕರಣ ನಡೆಯುತ್ತಿಲ್ಲ ಎಂದು ಖಚಿತಪಡಿಸಲು ಜಿಲ್ಲಾ ಶುಚಿತ್ವ ಮಿಶನ್‌ಗೆ ಹೊಣೆ ನೀಡಲಾ ಗಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಎಡಿಎಂ, ಜಿಲ್ಲಾವೈದ್ಯಾಧಿಕಾರಿ, ಜಿಲ್ಲಾ ಶುಚಿತ್ವ ಮಿಶನ್ ಕೋ-ಆರ್ಡಿನೇಟರ್, ಎಸ್.ಎಚ್.ಒ. ವಿದ್ಯಾನಗರ ಠಾಣೆ ಭಾಗವಹಿಸಿದರು.