ಡಾ. ನಾ. ಮೊಗಸಾಲೆ ಪೌರಾಭಿನಂದನೆ, ಸಾಹಿತ್ಯ ಸಮೀಕ್ಷೆ 10ರಂದು
ಮೀಯಪದವು: ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿಷ್ಠಾನ ಬೆಂಗಳೂರು, ವಿಕಾಸ ಮೀಯಪದವು ಇದರ ಆಶ್ರಯ ದಲ್ಲಿ ಡಾ. ನಾ. ಮೊಗಸಾಲೆ, ಪೌರಾಭಿ ನಂದನೆ ಹಾಗೂ ಸಾಹಿತ್ಯ ಸಮೀಕ್ಷೆ ಈ ತಿಂಗಳ 10ರಂದು ಬೆಳಿಗ್ಗೆ 10ರಿಂದ ಮೀಯಪದವು ಶ್ರೀ ವಿದ್ಯಾವ ರ್ಧಕ ಉನ್ನತ ಪ್ರೌಢಶಾಲೆಯ ನಾರಾಯಣೀ ಯಂ ರಂಗಮಂದಿರದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ. ಮಹೇಶ್ ಜೋಷಿ ಉದ್ಘಾಟಿಸುವರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಆಶಯ ನುಡಿದರು. ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು. ಡಾ. ಎಂ.ಪಿ. ಶ್ರೀನಾಥ್, ಡಾ| ಮುರಳೀ ಮೋಹನ್ ಚೂಂತಾರು, ತೆಕ್ಕೇಕರೆ ಶಂಕರನಾರಾ ಯಣ ಭಟ್, ಕೆ. ಮುರಳೀಧರ ಬಳ್ಳಕ್ಕು ರಾಯ ಅತಿಥಿಗಳಾಗಿ ಭಾಗವಹಿಸು ವರು. ನಿವೃತ್ತ ಮುಖ್ಯೋಪಾಧ್ಯಾಯ ರಾಜರಾಮ್ ರಾವ್ ಮೀಯಪದವು, ಡಾ. ಶಾರದಾ, ಸಾಹಿತಿ ಡಾ. ನಾ. ಮೊಗಸಾಲೆ ಉಪಸ್ಥಿತರಿರುವರು. 11.30ರಿಂದ ಸಾಹಿತ್ಯ ಸಮೀಕ್ಷೆ ನಡೆಯಲಿದ್ದು, ಮೊಗಸಾಲೆಯವರ ಕಾವ್ಯದ ಬಗ್ಗೆ ರಮೇಶ್ ಭಟ್ ಬೆಂಗಳೂರು, ಕಾದಂಬರಿ ಬಗ್ಗೆ ಡಾ. ಬಿ. ಜನಾರ್ದನ ಭಟ್, ಸಣ್ಣ ಕತೆಗಳ ಬಗ್ಗೆ ಡಾ. ಸುಭಾಷ್ ಪಟ್ಟಾಜೆ ವಿಚಾರ ಮಂಡಿಸುವರು. ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1ರಿಂದ ಸಂಧ್ಯಾಗೀತಾ ಬಾಯಾರು ಮತ್ತು ಬಳಗದವರಿಂದ ಮೊಗಸಾಲೆ ಕಾವ್ಯ ಗಾಯನ ನಡೆಯಲಿದೆ. ಅಪರಾಹ್ನ 2ರಿಂದ ಡಾ. ಯು. ಮಹೇಶ್ವರಿ ಅಧ್ಯಕ್ಷತೆಯಲ್ಲಿ ನಾ ಮೆಚ್ಚಿದ ಕಾದಂಬರಿ ಬಗ್ಗೆ ಸ್ವಾತಿ ಕೆ. ಪೊನ್ನೆತ್ತೋಡು, ಅನನ್ಯ ಬೇಕಲ, ಪಲ್ಲವಿ ಕೆ. ಮಲ್ಲ ಮಾತನಾಡುವರು. 2.45ರಿಂದ ಮೊಗಸಾಲೆಯವರೊಂದಿಗೆ ಲೋಕಾಭಿರಾಮ ನಡೆಯಲಿದ್ದು, ಪ್ರೊ. ಪಿ.ಎನ್. ಮೂಡಿತ್ತಾಯ, ಡಾ. ಪ್ರಮೀಳಾ ಮಾಧವ್, ಡಾ. ಧನಂಜಯ ಕುಂಬಳೆ ಭಾಗವಹಿಸುವರು. ಡಾ. ಎಸ್.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು. 3.30 ರಿಂದ ನಾ ಮೊಗಸಾಲೆಯವರಿಗೆ ಅಭಿನಂದನೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಡಾ. ವರದರಾಜ ಚಂದ್ರಗಿರಿ ಅಭಿನಂದನಾ ಮಾತು ನುಡಿವರು. ಡಾ. ರಾಧಾಕೃಷ್ಣ ಬೆಳ್ಳೂರು ಸನ್ಮಾನ ಪತ್ರ ವಾಚಿಸುವರು. ಬಳಿಕ ನಾ. ಮೊಗಸಾಲೆ ಮಾತನಾಡುವರು. ಡಾ. ಹರಿಕೃಷ್ಣ ಭರಣ್ಯ, ವಿಠಲ ಶೆಟ್ಟಿ ಬೇಲಾಡಿ, ಉಮೇಶ್ ಎಂ. ಸಾಲ್ಯಾನ್, ವಾಮನ ರಾವ್ ಬೇಕಲ್, ರವಿ ನಾಯ್ಕಾಪು, ಶ್ರೀನಿವಾಸ ರಾವ್ ಪಿ.ಜಿ, ಶಿವರಾಮ ಕಾಸರಗೋಡು, ಜಯಲಕ್ಷ್ಮಿ ಕಾರಂತ, ಶ್ರೀಧರ ರಾವ್ ಆರ್.ಎಂ. ಉಪಸ್ಥಿತರಿರುವರು. ವಿಶಾಲಾಕ್ಷ ಪುತ್ರಕಳ, ದಿವ್ಯಾ ಗಟ್ಟಿ ಪರಕ್ಕಿಲ ಭಾಗವಹಿಸುವರು.