ತಲೆಹೊರೆ ಕಾರ್ಮಿಕ ಹೃದಯಾಘಾತದಿಂದ ನಿಧನ
ಕಾಸರಗೋಡು: ಕೆಲಸ ಮುಗಿಸಿ ಮನೆಗೆ ತಲುಪಿ ಆಹಾರ ಸೇವಿಸಿ ನಿದ್ರಿಸಿದ್ದ ತಲೆಹೊರೆ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಉಳಿಯತ್ತಡ್ಕ ಎಸ್ಪಿ ನಗರ ನೇತಾಜಿ ಕಾಲನಿಯ ಬಾಬು- ಮೀನಾಕ್ಷಿ ದಂಪತಿ ಪುತ್ರ ಕೆ. ಸುಬೀಶ್ (39) ಮೃತಪಟ್ಟ ವ್ಯಕ್ತಿ ಯಾಗಿದ್ದಾರೆ. ಬಟ್ಟಂಪಾರೆಯ ಸಿಮೆಂಟ್ ಗೋಡೌನ್ವೊಂದರಲ್ಲಿ ತಲೆಹೊರೆ ಕಾರ್ಮಿಕನಾಗಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ತಲುಪಿ ಆಹಾರ ಸೇವಿಸಿದ ಬಳಿಕ ನಿದ್ರಿಸಿದ್ದರು. ಈ ಮಧ್ಯೆ ಅಸೌಖ್ಯ ಕಾಣಿಸಿಕೊಂಡ ಸುಬೀಶ್ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿ ತಾದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಸಹೋದರಿ ಸುಶ್ಮಿತಾ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.