ತಾವರೆ ಚಿಹ್ನೆಯೊಂದಿಗೆ ಕೇರಳೀಯರ ಅಸಹ್ಯ ಮನೋಭಾವ ಬದಲಾಗಿದೆ – ಕೆ. ಮುರಳೀಧರನ್

ತಿರುವನಂತಪುರ: ತಾವರೆ ಚಿಹ್ನೆ ಯೊಂದಿಗೆ ಕೇರಳದ ಜನರಿಗಿದ್ದ ಅಸಹ್ಯ ಮನೋಭಾವ ಬದಲಾಗಿದೆ ಎಂದು ಕಾಂಗ್ರೆಸ್ ನೇತಾರ ಕೆ. ಮುರಳೀ ಧರನ್ ಅಭಿಪ್ರಾಯಪಟ್ಟಿದ್ದಾರೆ. ತೃಶೂರ್ ನಲ್ಲಿ  ಒಂದು ಮತ ವಿಭಾಗದ ಹೊರತು ಬಾಕಿ ಎಲ್ಲರೂ ಬಿಜೆಪಿಗೆ ಮತ ಚಲಾಯಿಸಿ ದ್ದಾರೆ. ಸುರೇಶ್ ಗೋಪಿ ಸಿನಿಮಾ ನಟನಾ ದುದರಿಂದ ಮಾತ್ರ ಗೆಲುವು ಸಾಧಿಸಿದ್ದಲ್ಲ. ತಿರುವನಂತಪುರಕ್ಕೆ ಒಂದು ತಿಂಗಳ ಮುಂಚೆಯೇ ರಾಜೀವ್ ಚಂದ್ರಶೇಖರ್ ಬಂದಿರುತ್ತಿದ್ದರೆ ಅಲ್ಲಿಯ ಸ್ಥಿತಿ ಬದಲಾಗು ತ್ತಿತ್ತೆಂದೂ ಮುರಳೀಧರನ್ ತಿಳಿಸಿದ್ದಾರೆ.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಕಾಂಗ್ರೆಸ್ ನಾಯಕತ್ವಕ್ಕೆ ಪೂರ್ಣ ಆತ್ಮವಿಶ್ವಾಸವಿಲ್ಲ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ಪ್ರಯತ್ನ ಸಾಲದು ಎಂದು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿದಿರುವುದರಿಂದಲೇ ವಯನಾಡ್‌ನಲ್ಲಿ ಪಕ್ಷದ ಸಭೆ ಸೇರಲಾಗಿದೆ. ಈ ಸಭೆಯಲ್ಲಿ ತಾನು ಭಾಗವಹಿಸುವು ದಿಲ್ಲವೆಂದು ಮೊದಲೇ ತಿಳಿಸಿದ್ದೆನು. ಮುಂದಿನ ನಿರ್ಧಾರವನ್ನು ಜ್ಯಾರಿಗೊಳಿಸಲು ಪಕ್ಷದ ಜೊತೆಗೆ ತಾನಿದ್ದೇನೆಂದೂ ಮುರಳೀಧರನ್ ತಿಳಿಸಿದ್ದಾರೆ.

RELATED NEWS

You cannot copy contents of this page