ದುಬಾಯಿಯಲ್ಲಿ ಕುಸಿದುಬಿದ್ದಿ ಯುವಕನ ಮೃತದೇಹ ಊರಿಗೆ

ಕಾಸರಗೋಡು: ದುಬಾಯಿಯಲ್ಲಿ ಕೆಲಸ ಸ್ಥಳದಲ್ಲಿ ಕುಸಿದುಬಿದ್ದು ಮೃತಪಟ್ಟ ಮಾಂಙಾಡ್ ನಿವಾಸಿಯ ಮೃತದೇಹ ವನ್ನು  ಬೆಳಿಗ್ಗೆ ಊರಿಗೆ ತರಲಾಗಿದೆ. ಮಾಂಙಾಡ್ ಕುಳಿಕುನ್ನ್ ನಿವಾಸಿ ಅಜಿತ್ ಕುಮಾರ್ (೨೮) ಮೃತಪಟ್ಟವರು. ೧೧ ರಂದು ಬೆಳಿಗ್ಗೆ ದುಬಾಯಿ ಉಮ್ಮಲ್ ಕುವೈತ್‌ನಲ್ಲಿ ಕೆಲಸದ ಸ್ಥಳದಲ್ಲಿ ಅಜಿತ್ ಕುಮಾರ್ ಕುಸಿದುಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ತಂದೆ ಕುಟ್ಟಿಕೃಷ್ಣನ್, ತಾಯಿ ಮಲ್ಲಿಕ, ಪುತ್ರ ಅಜಿತ್ ಕುಮಾರ್, ಸಹೋದರ ಅನಿಲ್, ಸಹೋದರಿ ಅಜಿತಾರನ್ನು ಅಗಲಿದ್ದಾರೆ.

RELATED NEWS

You cannot copy contents of this page