ದೈವವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದವರನ್ನು ಬಹಿಷ್ಕರಿಸಲು ಕರೆ
ಕಾಸರಗೋಡು: ಉತ್ತರ ಮಲಬಾರ್‌ನಲ್ಲಿ ಭಕ್ತಿಪೂರ್ವಕ ಆಚಾರ ಅನುಷ್ಠಾನ ನಡೆಸುವ, ಬನಗಳಲ್ಲಿ, ದೈವಸ್ಥಾನಗಳಲ್ಲಿ ಕಟ್ಟಿಯಾಡುವ ದೈವಗಳನ್ನು ವಿದೇಶಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿ ಸಮಾಜದ ನಂಬಿಕೆಗೆ ದ್ರೋಹವೆಸಗಿದ ದೈವಕಲಾವಿದರನ್ನು ಬಹಿಷ್ಕರಿಸಬೇಕೆಂದು ಭಗವತೀ ಸೇವಾ ಸಂಘ ಅಧ್ಯಕ್ಷ ಸತೀಶನ್ ಎನ್ ಆಗ್ರಹಿಸಿದರು. ಸ್ವಾರ್ಥದಿಂದ, ಹಣಕ್ಕಾಗಿ, ಪ್ರಶಸ್ತಿ ಗಾಗಿ ಆಚಾರ ಅನುಷ್ಠಾನಕ್ಕೆ ವಿರುದ್ಧವಾಗಿ ಕಾರ್ಯಾ ಚರಿಸಿದವರನ್ನು ಬಹಿಷ್ಕರಿಸಲು ತೀಯಾ ಸಮು ದಾಯ ಮುಂದಾಗಬೇಕೆಂದು ಅವರು ಆಗ್ರಹಿಸಿ ದರು. ಈ ರೀತಿಯ ಕೆಲಸಗಳು ಮುಂದುವರಿದಲ್ಲಿ ತೀಯಾ ಸಮುದಾಯದ ತೀವ್ರ ಪ್ರತಿಭಟನೆಗೆ ಮುಂದಾಗಬೇ ಕಾದೀತೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.