ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆÀಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರಿಗಾಗಿ ಮಾಹಿತಿ ಕಾರ್ಯಾ ಗಾರ ಹಮ್ಮಿಕೊಳ್ಳಲಾಯಿತು.ಇದೇ ಸಂದರ್ಭ 2023-24ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ-ಪ್ಲಸ್ ಪಡೆದ ಒಟ್ಟು 32 ವಿದ್ಯಾರ್ಥಿಗಳಿಗೆ ಹಾಗೂ 9 ವಿಷಯಗಳಲ್ಲಿ ಎ-ಪ್ಲಸ್ ಪಡೆದ 11 ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ, ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ “ಮೇಪೋಡು ಸುಬ್ರಾಯ ಮಯ್ಯ” ದತ್ತಿನಿಧಿಯನ್ನು ಆಯ್ದ 2 ವಿದ್ಯಾರ್ಥಿ ಗಳಿಗೆ ಶಿಕ್ಷಕಿ ಈಶ್ವರಿ. ಡಿ ವಿತರಿಸಿದರು. ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ ಸುಶ್ರೀತ್ ಎಸ್ ಐಲ್ನ್ನು ಗೌರವಿಸಲಾಯಿತು. 2022-23ನೇ ಸಾಲಿನ ಯು ಎಸ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಎಲ್ಲಾ 8 ವಿದ್ಯಾರ್ಥಿಗಳನ್ನು, 2023-24 ನೇ ಸಾಲಿನ ರಾಷ್ಟ್ರೀಯ ಮಟ್ಟದ ಎನ್ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸ್ಕಾಲರ್ಶಿಫ್ಗೆ ಅರ್ಹತೆ ಪಡೆದ ಈಶಾನ್ ಶರ್ಮನನ್ನು ಅಭಿನಂದಿಸಲಾಯಿತು. ಇದರೊಂದಿಗೆ ಸುಮಾರು 15 ವರ್ಷಗಳ ಕಾಲ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಹೊಂದು ತ್ತಿರುವ ಸುಬ್ರಹ್ಮಣ್ಯ ಭಟ್ರನ್ನು ಗೌರವಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇನೇಜರ್ ಶಂಕರನಾರಾಯಣ ಭಟ್ ಶುಭ ಹಾರೈಸಿದರು. ಮೂಡಂಬೈಲ್ ಶಾಲೆ ಯ ಮುಖ್ಯೋಪಾಧ್ಯಾಯ ಜೋರ್ಜ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತ ರಿದ್ದÀರು. ಪ್ರಾಂಶು ಪಾಲ ರಾಮಚಂದ್ರ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಪಿ.ಟಿ.ಎ ಉಪಾಧ್ಯಕ್ಷ ವೇಣು ಗೋಪಾಲ ಶೆಟ್ಟಿ,ಶಿಕ್ಷಕಿ ಉಮಾದೇವಿ ಶುಭನುಡಿಗಳನ್ನಾಡಿ ದರು. ಸುನಿತಾ ಸ್ವಾಗತಿಸಿ, ಪ್ರದೀಪ್ ವಂದಿಸಿದರು. ಪ್ರಶಾಂತ್ ಹೊಳ್ಳ ಎನ್ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.